ಯಗವಕೋಟೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಟರಾಜ್-ಅಂಜಲಿ ದಂಪತಿಯ 2ನೇ ಮಗ ಯಶ್ವಂತ್ ಒಂದನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಶಾಲೆಯ ಶಿಕ್ಷಕಿ ಸರಸ್ವತಿ ಎಂಬುವರು ಕೋಲಿನಿಂದ ಬೇರೆ ಬಾಲಕನಿಗೆ ಹೊಡೆಯಲು ಹೋಗಿದ್ದಾರೆ. ಈ ವೇಳೆ ಯಶ್ವಂತ್ ಕಣ್ಣಿಗೆ ಕೋಲಿನ ಪೆಟ್ಟು ಬಿದ್ದಿದೆ ಪರಿಣಾಮ ಯಶ್ವಂತ್ ಬಾಲಭಾಗದ ಕಣ್ಣು ಕಳೆದುಕೊಂಡಿದ್ದಾನೆ.ಮೂರು ಬಾರೀ ಆಪರೇಷನ್ ನಡೆದರೂ ಸಹ ಕಣ್ಣು ಕಾಣದೆ ಪರದಾಟ ಅನುಭವಿಸುತ್ತಿದ್ದಾನೆ. ತಮ್ಮ ಮಗ ಕಣ್ಣು ಕಳೆದುಕೊಂಡ ಹಿನ್ನೆಲೆ ಬಾಲಕನ ತಂದೆ-ತಾಯಿ ನ್ಯಾಯಕ್ಕಾಗಿ ಚಿಂತಾಮಣಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಧರಣಿ ಕೂತಿದ್ದಾರೆ. ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Oplus_131072