Breaking News

ಅಂತರ್ಜಾತಿ ವಿವಾಹ, ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ ಕೈ ಕೊಟ್ಟು ಪರಾರಿ!!

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುತ್ತಿದ್ದ ತಾಲ್ಲೂಕಿನ ಬನ್ನಿಕುಪ್ಪೆಯ ಎಸ್‌ಸಿ ಸಮುದಾಯದ ರಕ್ಷಿತಾ ಮತ್ತು ರೀಲ್ಸ್‌ಗಳನ್ನು ಮೆಚ್ಚಿ ಸಂದೇಶ ಕಳಿಸುತ್ತಿದ್ದ ಬಿಳಗುಂಬದ ಒಕ್ಕಲಿಗ ಸಮುದಾಯದ ಪ್ರತಾಪ್ ನಡುವಣ ಸ್ನೇಹ ಪ್ರೀತಿಗೆ ತಿರುಗಿತ್ತು. ಅಂತರ್ಜಾತಿ ಕಾರಣಕ್ಕೆ ಮದುವೆಗೆ ಇಬ್ಬರ ಮನೆಯವರೂ ವಿರೋಧಿಸಿದ್ದರು. ವಿರೋಧ ಲೆಕ್ಕಿಸದೆ ವರ್ಷದ ಹಿಂದೆ ಇಬ್ಬರೂ ತಿರುಪತಿಯಲ್ಲಿ ಮದುವೆಯಾಗಿದ್ದರು.ವರ್ಷದ ಬಳಿಕ ಜಾತಿ ಕಾರಣಕ್ಕೆ ಯುವತಿಗೆ ಕೈ ಕೊಟ್ಟು ತಲೆ ಮರೆಸಿಕೊಂಡಿದ್ದಾನೆ.ಅತ್ತ ಪತಿ ಮನೆಯವರು ಸೇರಿಸದೆ ಇತ್ತ ತವರು ಮನೆಯಲ್ಲೂ ಆಶ್ರಯ ಸಿಗದೆ ಅತಂತ್ರ ಸ್ಥಿತಿ ತಲುಪಿರುವ ಯುವತಿ, ತಾಲ್ಲೂಕಿನ ಬಿಳಗುಂಬದಲ್ಲಿರುವ ಪತಿ ಮನೆ ಎದುರು ನ್ಯಾಯಕ್ಕಾಗಿ ಎದುರು ಬುಧವಾರ ಧರಣಿ ನಡೆಸಿದ್ದಾಳೆ.

Share News

About BigTv News

Check Also

ಪ್ರೇಯಸಿ ಕರೆದಿದ್ದಕ್ಕೆ ಬಂದ ಯುವಕ ಸಿಕ್ಕಿಬಿದ್ದ: ಸ್ನೇಹಿತರ ಸಮೇತ ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು!

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಬತ್ತಿಕೊಪ್ಪ ಗ್ರಾಮದಲ್ಲಿ ಪ್ರೀತಿಸಿದ ಯುವತಿಯನ್ನು ಮದುವೆಯಾಗಲು ಬಂದ ಪ್ರಮೋದ್ ಹಾಗೂ ಆತನ ಸ್ನೇಹಿತರಾದ ಪ್ರಕಾಶ್, …

Leave a Reply

Your email address will not be published. Required fields are marked *