ನವಲಗುಂದ: ಪಟ್ಟಣದಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಕಂಪೌಂಡ ಗೋಡೆ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ಎನ್ ಎಚ್ ಕೋನರಡ್ಡಿ ನೇರವೆರಿಸಿದರು.
ಈ ವೇಳೆ ಮಾತನಾಡಿದ ಅವರು ಇಲಾಖೆಯಿಂದ ಬೆಳೆಸುತ್ತಿರುವ ಸಸಿ ಹಾಗೂ ಗಿಡಗಳ ವೀಕ್ಷಣೆ ವೇಳೆ ಮಾತನಾಡಿದ ಅವರು ರೈತರು ಹೆಚ್ಚಿನ ಪರಿಶ್ರಮ ಪಟ್ಟರೆ ಕೃಷಿ ಹಾಗೂ ತೋಟಗಾರಿಕೆಯನ್ನು ಲಾಭದಾಯಕವಾಗಿಸಬಹುದಾಗಿದೆ ಎಂದರು.
ಇದೆ ವೇಳೆ ಅಧಿಕಾರಿಗಳು ನೀರಿನ ಕೊರತೆ ಇದೆ ಎಂದು ತಿಳಿಸಿದಾಗ. ಪುರಸಭೆ ಅಧಿಕಾರಿಗಳಿಗೆ ನೀರಿನ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದರು. ನಂತರ ಕಛೇರಿಯ ಆವರಣದಲ್ಲಿನ ವಿವಿಧ ಹಣ್ಣಿನ ಬೆಳೆಗಳನ್ನು ಪರಿಶೀಲಿಸಿದರು.
ಸಹಾಯಕ ನಿರ್ದೇಶಕರಾದ ಸಂಜೀವಕುಮಾರ ಗುಡಿಮನಿ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ ಸದಸ್ಯರಾದ ಬಸವರಾಜ ಕಟ್ಟಿಮನಿ, ಮೋದಿನ ಶಿರೂರು, ಹನುಮಂತ ವಾಲಿಕಾರ, ಅಧಿಕಾರಿಗಳಾದ ಸಂಗಮೇಶ ಯಾರಗಲ್ಲ, ಜ್ಯೋತಿ ಅಂಗಡಿ, ಶಶಿಕಲಾ ನಾಡಗೌಡ, ಬಸವರಾಜ್ ಕಿತ್ತೂರು, ವಿನಾಯಕ ಮುಖಂಡರಾದ ಅಲ್ಲಾಸಾಬ ಕಲ್ಕುಟ್ರಿ, ಸಂತೋಷ ಪಾಟೀಲ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





