ಬೆಂಗಳೂರಿನ ಜಯನಗರದ ಬಾಟಾ ಶೋ ರೂಮ್ ಬಳಿ ಜೂ.13ರಂದು ನಡೆದ ಘಟನೆಯ ಒಂದು ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರ‍್ಯಾಪಿಡೋ ಬುಕ್ ಮಾಡಿಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್ ಟ್ಯಾಕ್ಸಿ ಚಾಲಕ ಹಲ್ಲೆ ಮಾಡಿದ್ದು, ಒಂದು ಹೊಡೆತಕ್ಕೆ ಯುವತಿ ರಸ್ತೆಗೆ ಮುಗ್ಗರಿಸಿ ಬೀಳುತ್ತಾರೆ.ಪ್ರಾರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ NCR ಮಾತ್ರ ದಾಖಲಿಸಲಾಗಿತ್ತು. ಆದರೆ ವಿಡಿಯೋ ವೈರಲ್ ಆದ ನಂತರ, ಶ್ರೇಯಾ ತನ್ನ ಸ್ನೇಹಿತರ ಒತ್ತಾಯದ ಮೇರೆಗೆ ತಾಣಕ್ಕೆ ಹೋಗಿ ಅಧಿಕೃತ ದೂರು ನೀಡಿದ್ದಾರೆ. ಇದೀಗ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸರು ಸುಹಾಸ್ ವಿರುದ್ಧ IPC ಸೆಕ್ಷನ್ 352 (ಹಲ್ಲೆ), 115(2), ಮತ್ತು 79 ಅಡಿ FIR ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಅವರು ಮಾತನಾಡಿ, ‘ಸದ್ಯ ಚಾಲಕ ಸುಹಾಸ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದು, ಶ್ರೇಯಾ ಅವರ ದೂರು ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಇಬ್ಬರನ್ನೂ ವಿಚಾರಣೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

