Breaking News

Police In Honeytrap: ಹನಿಟ್ರ್ಯಾಪ್‌ ಕೃತ್ಯದಲ್ಲಿ ಸಿಕ್ಕಿಬಿದ್ದಿದ್ದ ಪೊಲೀಸ್ ಅರೆಸ್ಟ್..!!

ಈತನ ಕಹಾನಿ ಕೇಳಿ ಪೊಲೀಸ್​​ ಇಲಾಖೆಯೇ ಶಾಕ್..​!

ಸುಂದರ ಯುವತಿಯರನ್ನ ಬಳಸಿಕೊಂಡು ಹನಿಟ್ರ್ಯಾಪ ದಂಧೆ..??

ಮೈಸೂರಶ್ರೀ ಬಿಟ್ಟು ಹನಿ ಹಿಂದಿನ ಕತರ್ನಾಕ್ ಪೊಲೀಸ್..

ಬೇಲಿಯೇ ಎದ್ದು ಹೋಲ ಮೇಯ್ದಂತೇ..!!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಕಾನೂನು ಕಾಪಾಡಬೇಕಾದ ಪೊಲೀಸ್ ಸಿಬ್ಬಂದಿಯೇ ಹನಿಟ್ರ್ಯಾಪ್ ಕೃತ್ಯದಲ್ಲಿ ತೊಡಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬಂತೆ, ಕಾನೂನು ಕಾಪಾಡಬೇಕಾದವರೇ ಅಪರಾಧದ ಜಾಲಕ್ಕೆ ಸಿಕ್ಕಿಬಿದ್ದಿದ್ದಾರೆ. ಈ ಕೃತ್ಯದಲ್ಲಿ ಆರೋಪಿಗಳು ಕಂಪಲಾಪುರದ ದಿನೇಶ್ ಕುಮಾರ್ ಎಂಬ ವ್ಯಕ್ತಿಯನ್ನು

ಗುರಿಯಾಗಿಸಿ ಕೊಂಡಿದ್ದರು. ಸುಂದರ ಯುವತಿಯೊಬ್ಬಳನ್ನು ಬಳಸಿಕೊಂಡು ಆರೋಪಿಗಳ ಗುಂಪು ದಿನೇಶ್‌ನನ್ನು ತಮ್ಮ ಜಾಲಕ್ಕೆ ಬೀಳಿಸಿ, ಹಣ ದೋಚುವ ಯೋಜನೆ ರೂಪಿಸಿತ್ತು. ಈ ಗುಂಪಿನಲ್ಲಿ ಶಿವಣ್ಣ ಎಂಬ ಪೊಲೀಸ್ ಸಿಬ್ಬಂದಿಯೂ ಭಾಗಿಯಾಗಿದ್ದರು. ಈ ಹನಿಟ್ರ್ಯಾಪ್ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳನ್ನು ಎ1 ಮೂರ್ತಿ, ಎ2 ಶಿವಣ್ಣ (ಪೊಲೀಸ್ ಸಿಬ್ಬಂದಿ), ಮತ್ತು ಇತರ ಮೂವರು ಎಂದು ಗುರುತಿಸಲಾಗಿದೆ.ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೀಪಕ್ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಜೈಲಿಗೆ ಕಳುಹಿಸಲಾಗಿದೆ.

Share News

About Shaikh BigTv

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *