ಔಷಧಿ ತರಲು ನನ್ನ ಮಗನು ಬಿ.ಸಿ.ರೋಡ್‌ಗೆ ಶನಿವಾರ ತನ್ನ ಪತ್ನಿ ಹಾಗೂ ಮಕ್ಕಳ ಜೊತೆ ತೆರಳಿದ್ದ. ಅಲ್ಲಿಂದ ಮರಳುವಾಗ ಆತ ಮೂರು ಮಾರ್ಗದ ಬಳಿ ರಿಕ್ಷಾದಿಂದ ಇಳಿದಿದ್ದ. ಆ ಬಳಿಕ ಮನೆಗೆ ಮರಳದೇ ನಾಪತ್ತೆಯಾಗಿದ್ದ’ ಎಂಬುದಾಗಿ ಸಾಗರ್ ತಂದೆ ಜನಾರ್ದನ ಪೂಜಾರಿ ಅವರು ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು. ಸಾಗರ್‌ಗಾಗಿ ಆತನ ಮನೆಯವರು, ಬಂಧುಗಳು ಹಾಗೂ ಗೆಳೆಯರು ಹುಡುಕಿದ್ದರು. ಆದರೂ ಆತನ ಸುಳಿವು ಸಿಕ್ಕಿರಲಿಲ್ಲ. ಕಲ್ಲು ಕ್ವಾರಿಯ ಹೊಂಡದಲ್ಲಿ ಆತನ ಮೃತದೇಹ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸಾಗರ್ ಕೊಲೆಯಾಗಿರ ಬಹುದು ಎಂದು ಬಂಧುಗಳು ಹಾಗೂ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

