ಪಶ್ಚಿಮ ಬಂಗಾಳದ ನಾಡಿಯಾದ ಕೃಷ್ಣಗಂಜ್‌ನ ಶಿಬ್ನಿಬಾಸ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ಚಿಕ್ಕಪ್ಪ ಮತ್ತು ಚಿಕ್ಕಮ್ಮನ ಮುಂದಾಳತ್ವದಲ್ಲಿ ಈ ಶ್ರಾದ್ಧ ಕಾರ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿ ಹನ್ಸ್‌ಖಾಲಿ ಘಜ್ನಾ ಪ್ರದೇಶದ ಬೇರೆ ಧರಮದ ಯುವಕನನ್ನ ಪ್ರೀತಿಸಿ ಓಡಿ ಹೋಗಿ ಮದುವೆಯಾಗುತ್ತಾಳೆ. ಇದನ್ನ ತಿಳಿದ ಕುಟುಂಬಕ್ಕೆ ಕೋಪ ಬರುತ್ತದೆ. ಮಗಳ ಈ ನಿರ್ಧಾರ ಸಹಿಸದ ಕುಟುಂಬಸ್ಥರು, ಮಗಳ ಮದುವೆಯಾದ 12 ದಿನಗಳ ನಂತರ ತಮ್ಮ ಮಗಳು ನಮ್ಮ ಪಾಲಿಗೆ ಇಲ್ಲ ಎಂದು ಪರಿಗಣಿಸಿ ಈ ಕಾರ್ಯ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

