Breaking News

ಹುಬ್ಬಳ್ಳಿ: ವಾಹನದಲ್ಲಿ ಬಿಟ್ಟು ಹೋಗಿದ್ದ 1.49 ಲಕ್ಷ ಹಣವನ್ನು ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ

ಹುಬ್ಬಳ್ಳಿಯಲ್ಲಿನಗರದ ಆಸಾರ ಓಣಿಯ ಅಬ್ದುಲ್ ಸಾಬ್ ಎಂಬ ಆಟೋ‌ ಚಾಲಕ ಹಣ ಮರಳಿಸಿ ಪ್ರಾಮಾಣಿಕತೆ ಮೆರೆದವರು. 1,49,000 ರೂ. ಇದ್ದ ಹಣದ ಬ್ಯಾಗ್‌ನ್ನು ಹಾವೇರಿ ಮೂಲದ ಸಂಜಯ ಗೋಕರ್ಣಕರ್ ಎಂಬುವವರು ಅಬ್ದುಲ್​ ಸಾಬ್​ ಅವರ ಆಟೋದಲ್ಲಿ‌ ಬಿಟ್ಟು ನಗರದ ಪಗಡಿ ಗಲ್ಲಿಯಲ್ಲಿ ಇಳಿದುಕೊಂಡಿದ್ದರು.ಬಳಿಕ ಎಷ್ಟೋ ಹೊತ್ತಿನ ಮೇಲೆ ಸಂಜಯ್ ಅವರಿಗೆ ಬ್ಯಾಗ್ ನೆನಪಾಗಿ ಚಡಪಡಿಸಿದ್ದರು. ಕೂಡಲೇ ಬ್ಯಾಗ್ ಕಳೆದ ಬಗ್ಗೆ ದೂರು ನೀಡಲು ಘಂಟಿಕೇರಿ ಪೊಲೀಸ್ ಠಾಣೆಗೆ ತೆರಳಿದರು. ಆದರೆ ಅದಕ್ಕೂ ಮೊದಲೇ ಆಟೋ ಚಾಲಕ ತಮ್ಮ ಆಟೋದಲ್ಲಿ ಸಿಕ್ಕ ಹಣದ ಬ್ಯಾಗನ್ನು ಘಂಟಿಕೇರಿ ಪೊಲೀಸರಿಗೆ ತಲುಪಿಸಿದ್ದರು. ಆಟೋ ಚಾಲಕನ ಪ್ರಾಮಾಣಿಕತೆ ಕೊಂಡಾಡಿದ ಪೊಲೀಸರು ಹಣದ ಬ್ಯಾಗ್ ಅನ್ನು ಮಾಲೀಕನಿಗೆ ಒಪ್ಪಿಸಿದ್ದಾರೆ.ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಘಂಟಿಕೇರಿ ಠಾಣೆ ಇನ್ಸ್​ಪೆಕ್ಟರ್ ವಿನೋದ್ ಮುಖ್ತೇದಾರ್ 5,000 ರೂ. ನಗದು ಬಹುಮಾನ ನೀಡಿ ಸನ್ಮಾನಿಸಿದರು.‌

Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *