ಇರಾಕ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ಆರಂಭಿಸಿದೆ. ಈ ಮೂಲಕ, ಇಸ್ರೇಲ್ – ಇರಾನ್‌ಗೆ ಸೀಮಿತವಾಗಿದ್ದ ಸಂಘರ್ಷವು ಈಗ 5 ದೇಶಗಳಿಗೆ ವ್ಯಾಪಿಸಿದಂತಾಗಿದ್ದು, ಜಗತ್ತಿನಲ್ಲಿ “ಮಿನಿ ಮಹಾಯುದ್ಧ’ ಆರಂಭವಾದಂತಾಗಿದೆ. ಅಮೆರಿಕವು ರವಿವಾರ ಬೆಳಗಿನ ಜಾವ ಇರಾನ್‌ನ ಮೂರು ಪರಮಾಣು ಸ್ಥಾವರಗಳ ಮೇಲೆ “ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂಬ ಹೆಸರಿನಲ್ಲಿ ದಿಢೀರ್ ದಾಳಿ ನಡೆಸಿತ್ತು. ಇದಾದ 48 ಗಂಟೆಯಲ್ಲೇ ಇರಾನ್ ತಿರುಗೇಟು ನೀಡಿದೆ. “ಆಪರೇಷನ್ ಅಲ್-ಬಸತ್’ ಹೆಸರಿನಲ್ಲಿ ಇರಾನ್ ಪ್ರತಿದಾಳಿ ಆರಂಭಿಸಿದ್ದು, ಮಧ್ಯಮ ವ್ಯಾಪ್ತಿಯ ಸುಮಾರು 100ಕ್ಕೂ ಅಧಿಕ ಕ್ಷಿಪಣಿಗಳ ಮೂಲಕ ಇರಾಕ್ ಮತ್ತು ಕತಾರ್‌ನಲ್ಲಿರುವ ಅಮೆರಿಕದ ಸೇನಾನೆಲೆಗಳ ಮೇಲೆ ದಾಳಿ ನಡೆಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

