Breaking News

ಕ್ಷತ್ರಿಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಖಂಡಿಸಿ ಕ್ಷತ್ರಿಯ ಒಕ್ಕೂಟದಿಂದ ಪ್ರತಿಭಟನೆ.

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಗರಗ ಗ್ರಾಮದಲ್ಲಿ ಕ್ಷತ್ರಿಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರನ್ನು ಶೀಘ್ರವಾಗಿ ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಇಂದು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಬೆಳಗಾವಿಯ ಗಾಂಧಿನಗರದಲ್ಲಿ ವಾಸವಾಗಿರುವ ಕ್ಷತ್ರಿಯ ಸಮಾಜದ ಯುವಕ ಮಡಿವಾಳ ಅಶೋಕ ರಾಯಬಾಕರ ಎಂಬುವರನ್ನು ಅಲ್ಲಾಸಾಬ ನದಾಪ, ಎಳವಯ್ಯ ಚಿಕಮಠ, ಉದ್ದಪ್ಪಾ ಉಳ್ಳನ್ನವರ, ಸಿದ್ಧಯ್ಯ ಚಿಕ್ಕೊಪ ಚಿಕಮಠ, ಮಡಿವಾಳ ಕಾಳಿ, ಪೀರಜಾದೇ ಗುಲಾಬ ಎಲ್ಲರೂ ಸೇರಿ ಅಪಹರಿಸಿಕೊಂಡು ಹೋಗಿ ಹೊಲದಲ್ಲಿ ಕಟ್ಟಿ ಹಾಕಿ ಮನಸೋ ಇಚ್ಛೆ ತಳಿಸುವ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಯುವಕ‌ನ ತೊಡೆಯ ಭಾಗಕ್ಕೆ ವಿದ್ಯುತ್ ಶಾಖ ನೀಡಿರುವುದು ಖಂಡನೀಯವಾಗಿದೆ ಶೀಘ್ರವಾಗಿ ದುಷ್ಕರ್ಮಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.ಬಳಿಕ ತಹಶಿಲ್ದಾರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಅಶೋಕ ಕಾಟವೆ, ಕೇಶವ ಯಾದವ, ಲಕ್ಷ್ಮಣ ಗಂಡಗಾಳೇಕರ, ನಾರಾಯಣ ವೈದ್ಯ, ವಿನೋದ ಪಡತರೆ, ನೀಲಕಂಠಸಾ ಜಡೆ, ಕೆ.ಜಿ.ಟಿಕಾರೇ ಸೇರಿದಂತೆ ಇತರರು ಇದ್ದರು.

Share News

About admin

Check Also

ಗರ್ಭಿಣಿ ಮಗಳ ಕ್ರೂರವಾಗಿ ಹತ್ಯೆಗೈದ ತಂದೆ: ಕೃತ್ಯಕ್ಕೆ ಬೆಚ್ಚಿಬಿದ್ದ ಧಾರವಾಡ

ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಪೈಪ್‌ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ …

Leave a Reply

Your email address will not be published. Required fields are marked *