ಮಹಾರಾಷ್ಟ್ರದಲ್ಲಿ ಪ್ರತಿ ವರ್ಷವೂ ಆಷಾಢಿ ವಾರಿ ಅಥವಾ ಪಂಢರಾಪುರ್ ವಾರಿ ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಭಕ್ತರನ್ನು ವರ್ಕಾರೀಸ್ ಎಂದು ಕರೆಯಲಾಗುತ್ತದೆ. ಭಗವಾನ್ ವಿಠ್ಠಲನನ್ನು ನೆನಪಿಸಿ ಆರಾಧಿಸುವ ದಿನ ಇದಾಗಿದೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ನಡೆಯುವ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಈ ವಾರಿ ಕೂಡ ಒಂದು.ಮಮ್ಮದೇವಿ ಚೌಕ್ ಬಳಿಯ ಶೇಖ್ ಅವರ ಮನೆಯ ಮುಂಭಾಗದ ರಸ್ತೆಯಲ್ಲಿ ಪಲ್ಲಕ್ಕಿ ಮೆರವಣಿಗೆ ಹಾದುಹೋಗುತ್ತಿದ್ದಾಗ, ಆಕೆ ಜನರ ಮೇಲೆ ಮಾಂಸ ಎಸೆದು, ಏನು ಮಾಡುತ್ತೀರೋ ಮಾಡಿಕೊಳ್ಳಿ ಎಂದು ರಾಥೋಡ್ ಎಂಬುವವರಿಗೆ ಎಚ್ಚರಿಕೆ ನೀಡಿದ್ದಳು. ಕೂಡಲೇ ಅವರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಭಕ್ತರಿಗೆ ಮುಂದೆ ಸಾಗುವಂತೆ ಸೂಚನೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

