ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆಪ್ಟೆಂಬರ್ 11ರಂದು ನಗರದಲ್ಲಿ ಆಟೋ, ಟ್ಯಾಕ್ಸಿ ಸೇವೆ ಬಂದ್ ಮಾಡಿ ಮುಷ್ಕರ ಆಚರಿಸಲು ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ ಕರೆ ನೀಡಿದೆ. ಅದಕ್ಕೂ ಮುನ್ನವೇ ಚಾಲಕರ ಹೋರಾಟ ತೀವ್ರಗೊಂಡಿದೆ.
ಇಂದು ಜಯನಗರದ ಶಾಲಿನಿ ಆಟದ ಮೈದಾನದಲ್ಲಿ ಸಭೆ ಸೇರಿದ ಆಟೋ, ಟ್ಯಾಕ್ಸಿ ಚಾಲಕರು ವಾಹನಗಳಿಗೆ ಕಪ್ಪು ಬಾವುಟ ಕಟ್ಟಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನಮ್ಮ ಬೇಡಿಕೆ ಈಡೇರಿಸದಿದ್ದರೆ ಸೆಪ್ಟೆಂಬರ್ 10ರ ಮಧ್ಯರಾತ್ರಿಯಿಂದಲೇ ಆಟೋ, ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 32 ಖಾಸಗಿ ಸಾರಿಗೆ ಸಂಘಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.ಖಾಸಗಿ ಸಾರಿಗೆ ಸಂಘಗಳ ಬೇಡಿಕೆ ಏನು?
ಲೈಫ್‌ಟೈಮ್ ಟ್ಯಾಕ್ಸ್ ಹಿಂಪಡೆಯಬೇಕು
ಗೂಡ್ಸ್ ವಾಹನಗಳಿಗೆ ಆನ್‌ಲೈನ್ ಸಂಸ್ಥೆಗಳಿಂದ ಆಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು
ಶಕ್ತಿ ಯೋಜನೆಯಿಂದ ವಾಣಿಜ್ಯ ಬಳಕೆಯ ವಾಹನ ಚಾಲಕರಿಗೆ ಆಗುತ್ತಿರುವ ನಷ್ಟಕ್ಕೆ ಪರಿಹಾರ ನೀಡಬೇಕು
ಆನ್‌ಲೈನ್/ಆಫ್‌ಲೈನ್ ಕಾರುಗಳಗೆ ಒನ್ ಸಿಐ ಒನ್ ರೇಟ್ ಮಾಡಬೇಕು
ಓಲಾ, ಊಬರ್, ಪೋರ್ಟರ್ ಸಂಸ್ಥೆಗಳಿಂದ ಚಾಲಕರ ಬ್ಲಾಕ್ ಅಪ್ ತೆರವುಗೊಳಿಸಬೇಕು
ಖಾಸಗಿ ಬಸ್ ಗಳನ್ನು ಶಕ್ತಿ ಯೋಜನೆಗೆ ಸೇರ್ಪಡಿಸಬೇಕು
ಖಾಸಗಿ ಶಾಲಾ ವಾಹನಗಳಿಗೆ ಪರ್ಮಿಟ್ ನೀಡಬೇಕು
ಈ ಬಿಜೆಪಿ ಸರ್ಕಾರ ಅವಧಿಯಲ್ಲಿ ಚಾಲಕರ ಜೊತೆಗೆ ಕಾಂಗ್ರೆಸ್ ಸಂವಾದ ಮಾಡಿತ್ತು. ಡಿ.ಕೆ ಶಿವಕುಮಾರ್ ಆಟೋ ಓಡಿಸಿದ್ದರು. ಈಗ ಡಿ.ಕೆ ಶಿವಕುಮಾರ್ ಮೌನ ತಾಳಿದ್ದಾರೆ. ಆಟೋ, ಟ್ಯಾಕ್ಸಿ ಚಾಲಕರ ಅಕ್ರೋಶ ನಿಮಗೆ ಕೇಳ್ತಿಲ್ವಾ ಎಂದು ಚಾಲಕರು ಪ್ರಶ್ನಿಸಿದ್ದಾರೆ. ಮುಷ್ಕರ ದಿನ ನಿಮ್ಮ ವಾಹನಗಳಿಗೆ ಹಾನಿಯಾದರೆ ನಾವು ಜವಾಬ್ದಾರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





