ಹಾವೇರಿಯ ಶಿವಶಕ್ತಿ ಪ್ಯಾಲೇಸ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕಿಕ್ಕಿರಿದು ತುಂಬಿದ್ದ ಬಿಜೆಪಿ ಕಾರ್ಯಕರ್ತರು, ಹೊಸ ಹುರುಪಿನೊಂದಿಗೆ ಮುಂಬರುವ ಚುನಾವಣೆಗೆ ಕಹಳೆ ಊದಿದರು. ಬಿಜೆಪಿ ಬಾವುಟ ಹಸ್ತಾಂತರಿಸುವ ಮೂಲಕ ನೂತನ ಅಧ್ಯಕ್ಷರಿಗೆ ಅಧಿಕಾರ ವಹಿಸಲಾಯಿತು.ನೂತನ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ‘ಯಾವ ಗ್ಯಾರಂಟಿಗೂ ನಾವು ಸೋತಿಲ್ಲ. ಸಣ್ಣ ವಿಷಯಗಳಿಗೆ ಬಿಜೆಪಿಗೆ ಸೋಲಾಯಿತು. ನಮ್ಮಲ್ಲಿಯೇ ತಪ್ಪುಗಳನ್ನು ಮಾಡಿದ್ದಕ್ಕೆ ಜನರು ಶಿಕ್ಷೆ ಕೊಟ್ಟರು. ಆದರೆ, ಈಗ ನಾವು ಬದಲಾಗೋಣ. ಎಲ್ಲರೂ ಒಗ್ಗಟ್ಟಿನಿಂದ ಕಾಂಗ್ರೆಸ್‌ಗೆ ಬುದ್ದಿ ಕಲಿಸೋಣ’ ಎಂದರು.ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಮುಖಂಡರಾದ ಶಿವರಾಜ ಸಜ್ಜನರ, ಭರತ್ ಬೊಮ್ಮಾಯಿ, ನಾಗೇಂದ್ರ ಕಡಕೋಳ, ಶೋಭಾ ನಿಸ್ಸೀಮಗೌಡ್ರ, ಸಿದ್ದರಾಜ ಕಲಕೋಟಿ, ಗವಿಸಿದ್ದಪ್ಪ ದ್ಯಾಮಣ್ಣನವರ, ಸಂತೋಷಕುಮಾರ ಪಾಟೀಲ, ಭೋಜರಾಜ ಕರೂದಿ ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

