ಕರ್ನಾಟಕದ ಸ್ಟಾರ್ ಸ್ಪಿನ್ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಸಹ ಮಹಿಳಾ ಕೆರೆಬಿಯನ್ ಲೀಗ್‌ನಲ್ಲಿ (ಡಬ್ಲ್ಯುಸಿಪಿಎಲ್) ಆಡಲಿದ್ದಾರೆ. ಇವರು ಕಳೆದ ಒಂದು ವರ್ಷಗಳಿಂದ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗಿದ್ದರು. ಶ್ರೇಯ್ಯಾಂಕ್ ಪಾಟೀಲ್, ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಬಾರ್ಬಡೋಸ್ ರಾಯಲ್ಸ್ ಪರ ಆಡಲಿದ್ದಾರೆ. ಇವರು ಕಳೆದ ಆವೃತ್ತಿಯ ಡಬ್ಲ್ಯುಸಿಪಿಎಲ್‌ನಲ್ಲಿ ಆಡಿರಲಿಲ್ಲ. 2023ರಲ್ಲಿ ಗಯಾನಾ ವಾರಿಯರ್ಸ್ ತಂಡ ಫೈನಲ್ ತಲುಪಿರುವಲ್ಲಿ ಶ್ರೇಯಾಂಕ ಕೊಡುಗೆ ಅಪಾರ.22 ವರ್ಷದ ಕನ್ನಡತಿ ಶ್ರೇಯಾಂಕಾ ಈಗಾಗಲೇ ಭಾರತದ ಪರ ಆಡಿದ್ದಾರೆ. ಇವರು 3 ಏಕದಿನ ಹಾಗೂ 16 ಟಿ20 ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 25 ವಿಕೆಟ್ ಪಡೆದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

