ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆಯಿಂದ ನಮ್ಮ ವಠಾರಗಳೆಲ್ಲ ಸ್ಮಾರ್ಟ್ ಆಗುತ್ತೆ ಅಂದುಕೊಂಡವರು ಈಗ ಮನೆ ಬಿಟ್ಟು ಮಠ ಸೇರುವಂತಾಗಿದೆ . ಪಾಲಿಕೆಯ ನಿಷ್ಕಾಳಜಿಯಿಂದ ಜನರು ಆಸ್ಪತ್ರೆಗೆ ಅಲೆದಾಡುವಂತಾಗಿದೆ .
ವಾರ್ಡ್ ನಂಬರ್ 47 ರಲ್ಲಿ ಬರುವ ವಿದ್ಯಾನಗರದಲ್ಲಿ ಸುಮಾರು ದಿನಗಳಿಂದ ಒಳಚರಂಡಿ ನೀರು ಮನೆಗೆ ಹೊಕ್ಕು ಮನೆ ಮಂದಿಯೆಲ್ಲ ಮನೆ ಬಿಟ್ಟು ಮಠ ಸೇರುವಂತಾಗಿದೆ . ಇಷ್ಟು ದಿನ ನಾವೆಲ್ಲರೂ ಮನೆಗೆ ಮಳೆ ನೀರು ನುಗ್ಗಿರುವುದನ್ನು ನೋಡಿದ್ದೇವೆ . ಆದರೆ ಇಲ್ಲಿ ಚರಂಡಿ ನೀರು ಮನೆಗೆ ನುಗ್ಗಿದ್ದು , ಮನೆಯ ಸದಸ್ಯರು ಹುಬ್ಬಳ್ಳಿ ಸಿದ್ಧಾರೂಢರ ಮಠದಲ್ಲಿ ಆಶ್ರಯ ಪಡೆಯುವಂತಾಗಿದೆ . ಅಲ್ಲದೇ ಬಹುತೇಕರು ಆಸ್ಪತ್ರೆಯಲ್ಲಿ ದಾಖಲಾಗಿರುವುದು ನಿಜಕ್ಕೂ ಪಾಲಿಕೆ ನಿಷ್ಕಾಳಜಿಗೆ ಹಿಡಿದ ಕೈಗನ್ನಡಿಯಾಗಿದೆ . ಇನ್ನು ಸಮಸ್ಯೆ ಬಗ್ಗೆ ಇಲ್ಲಿನ ಜನರೇ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ನೋಡಿ
ಹಲವು ದಿನಗಳಿಂದ ಈ ಸಮಸ್ಯೆ ಬಗೆಹರಿಸುವಂತೆ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ . ಇಲ್ಲಿನ ಹಿಂದಿನ ಕಾರ್ಪೊರೇಟರ್ ಹಾಗೂ ಈಗಿನ ಚುನಾಯಿತ ಕಾರ್ಪೊರೇಟರ್ ಮೂಕ ಪ್ರೇಕ್ಷಕರಂತೆ ಉಳಿದುಬಿಟ್ಟಿದ್ದಾರೆ . ಕಳೆದ ಸುಮಾರು ಐದಾರು ವರ್ಷಗಳಿಂದ ಇಲ್ಲಿನ ಜನರು ಇಂತಹ ಸಮಸ್ಯೆ ಅನುಭವಿಸುತ್ತಿದ್ದುಸಮಸ್ಯೆ ಎದುರಾದ ಸಮಯದಲ್ಲಿ ಮನೆ ಬಿಟ್ಟು ಮಠ ಸೇರುವಂತಾಗಿದೆ .
ಒಟ್ಟಿನಲ್ಲಿ ಹುಬ್ಬಳ್ಳಿ – ಧಾರವಾಡ ಅವಳಿನಗರಕ್ಕೆ ಅದೆಷ್ಟು ಯೋಜನೆ ಬಂದರೂ ಕೂಡ ಸಮಸ್ಯೆಗಳಿಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಈ ಬಗ್ಗೆ ಪಾಲಿಕೆ ಆಯುಕ್ತರು ಸೂಕ್ತ ಕ್ರಮಗಳನ್ನು ಜರುಗಿಸಿ ಇಲ್ಲಿನ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

