ಅವಳಿ ನಗರದಲ್ಲಿ ಪೊಲೀಸರ ಆಂತರಿಕ ವರ್ಗಾವಣೆ
ಟ್ರಾಫಿಕ್ ಸ್ಟೇಷನ್ ಗಳಿಗೆ ಹೆಚ್ಚಿದ ಬೇಡಿಕೆ
ಪಾರದರ್ಶಕ ವರ್ಗಾವಣೆಗೆ ದಿಲ್ ಖುಷ್ ಆಗಿದೆ ಎಂದ ಪೊಲೀಸರು….
ಪೊಲೀಸ್ ಕಮಿಷನರ್ ಎನ್. ಶಶಿಕುಮಾರ ಅವರ ನೇತೃತ್ವದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾದ ವರ್ಗಾವಣೆ ಪ್ರಕ್ರಿಯೆ ಸಂಜೆ 5ರವರೆಗೂ ನಡೆಯಿತು.ಅವಳಿ ನಗರದ 19 ಪೊಲೀಸ್ ಠಾಣೆಗಳಲ್ಲಿ ಪ್ರಸ್ತುತ ವರ್ಷ ಒಟ್ಟು 247 ಸಿಬ್ಬಂದಿಯ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ಅಂತಿಮಗೊಳಿಸಲಾಗಿತ್ತು. ಅವರಲ್ಲಿ 38 ಎಎಸ್‌ಐ, 76 ಹೆಡ್ ಕಾನ್‌ಸ್ಟೆಬಲ್ ಮತ್ತು 133 ಕಾನ್‌ಸ್ಟೆಬಲ್‌ಗಳಿದ್ದರು.ವರ್ಗಾವಣೆ ಪಟ್ಟಿಯಲ್ಲಿ ಹೆಸರು ಅಂತಿಮವಾಗಿದ್ಡ ಕೆಲವು ಸಿಬ್ಬಂದಿ, ಅನಾರೋಗ್ಯ ಕಾರಣವೊಡ್ಡಿ ವರ್ಗಾವಣೆಗೆ ತಮ್ಮನ್ನು ಪರಿಗಣಿಸದಂತೆ ಕಮಿಷನರ್ ಅವರಲ್ಲಿ ವಿನಂತಿಸಿಕೊಂಡಿದ್ದರು.

ಕೆಲವರಿಗೆ ವಿಶೇಷ ಪ್ರಕರಣದ ಆಧಾರದ ಮೇಲೆ, ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಯ ಪಕ್ಕದ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಪತ್ರ ನೀಡಲಾಗಿದೆ. ಇದೇ ಮೊದಲ ಬಾರಿಗೆ, ವರ್ಗಾವಣೆ ಬಯಸುವ ಮೂರು ಠಾಣೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಿಬ್ಬಂದಿಗೆ ಅವಕಾಶ ಕಲ್ಪಿಸಲಾಗಿತ್ತು. ವರ್ಗಾವಣೆಗೆ ಅರ್ಹರಾಗಿದ್ದ 100ಕ್ಕೂ ಹೆಚ್ಚು ಸಿಬ್ಬಂದಿ, ಸಂಚಾರ ಠಾಣೆಗಳನ್ನೇ ಅರ್ಜಿಯಲ್ಲಿ ಮೊದಲ ಆದ್ಯತೆಯಾಗಿ ನಮೂದಿಸಿದ್ದರು. ಮೂರು ಸಂಚಾರ ಠಾಣೆಗಳಲ್ಲಿ ವರ್ಗಾವಣೆ ಹುದ್ದೆ 20ರಷ್ಟು ಮಾತ್ರವಿತ್ತು. ಈವರೆಗೆ ಕರ್ತವ್ಯ ನಿರ್ವಹಿಸಿರದ ಠಾಣೆಗಳಿಗೆ ವರ್ಗಾವಣೆ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

