Breaking News

ತೀವ್ರ ಸಂಚಲನ ಮೂಡಿಸಿದ ಅಮೀತ್ ಶಾ ಬೆಲ್ಲದ ಭೇಟಿ

ಧಾರವಾಡ: ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರನ್ನು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿಯಾಗಿ ಮಾತುಕತೆ ನಡೆಸಿದ್ದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ.

ಏಕಾಏಕಿ ಶಾಸಕ ಬೆಲ್ಲದ ಅವರು ಪಕ್ಷದ ಚಾಣುಕ್ಯ ಎಂದೆ ಹೆಸರಾದ ಅಮೀತ್ ಶಾ ಬೇಟಿಯಾಗಿ ಮಾತುಕತೆ ನಡೆಸಿರುವದು ಕುತೂಹಲ ಉಂಟುಮಾಡಿದೆ.

ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಮುಗಿದಿರುವದರಿಂದ ಕರ್ನಾಟಕ ರಾಜ್ಯದ ಸಚಿವ ಸಂಪುಟ ರಚನೆಯ ಹಾದಿ ಸುಗಮವಾಗಿದ್ದು ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವದು ಅಷ್ಟೇ ಅಲ್ಲದೇ ಪ್ರಮುಖ ಖಾತೆಗೆ ಡಿಮಾಂಡ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ಅವರನ್ನು ಸಿಎಮ್ ಸ್ಥಾನದಿಂದ ಕೆಳಗಿಳಿಸಿದಾಗ ಸಿಮ್ ಸ್ಥಾನದ ಆಕಾಂಕ್ಷೆಗಳ ಪಟ್ಟಿಯಲ್ಲಿ ಬೆಲ್ಲದ ಅವರ ಹೆಸರು ಮುಂಚೊನಿಯಲ್ಲಿ ಕೇಳಿಬಂದಿತ್ತು ಅಷ್ಟೇ ಅಲ್ಲದೇ ತಾವು ಅಭ್ಯರ್ಥಿ ಎನ್ನುವಂತೆ ದೆಹಲಿ ಮಟ್ಟದಲ್ಲಿ ರಾಜಕೀಯ ದಾಳ ಬೀಸಿದ್ದು ಈಗ ಗುಟ್ಟಾಗಿಯನೂ ಉಳಿದಿಲ್ಲ.

ಒಟ್ಟಿನಲ್ಲಿ ಶಾಸಕ ಅರವಿಂದ ಬೆಲ್ಲದ ನಾನು ಪಕ್ಷದ ಶಿಸ್ತಿನ ಸಿಪಾಯಿ ಪಕ್ಷದ ನಿಷ್ಠಾವಂತ ಸೇವಕ ಎಂದು ಬೆಲ್ಲದದಂತ ಮಾತಮಾಡುತ್ತಲೇ ರಾಜಕೀಯ ಸ್ಥಾನಮಾನಕ್ಕೆ ಜಾಣ ಹೆಜ್ಜೆ ಇಡುತ್ತಿರುವ ಬೆಲ್ಲದ ಅವರ ನಿಗೊಢ ನಡೆ ಕಾಯ್ದುನೋಡಬೇಕಾಗಿದೆ..!

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *