ಹಾಸನದಲ್ಲಿ ದಿನೇ ದಿನೇ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ನಿನ್ನೆ ತಾನೆ ಹೃದಯಾಘಾಟಕ್ಕೆ ಹಾಸನ ಜಿಲ್ಲೆಯ ಒಂದರಲ್ಲಿ ಐವರು ಸಾವನಪ್ಪಿದ್ದರು. ಇದೀಗ ಹಾಸನ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ತಾನೇ ಯುವಕನೊಬ್ಬ ಸಾವನಪ್ಪಿದ್ದು, ಇದೀಗ ಒಂದುವರೆ ತಿಂಗಳ ಬಾಣಂತಿ ಹೃದಯಘಾತದಿಂದ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.ಬಾಣಂತನಕ್ಕೆ ಆಯನೂರು ಗ್ರಾಮದ ತವರು ಮನೆಯಲ್ಲಿದ್ದ ಅಕ್ಷಿತಾ (22) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹಾಸನದ ಕೊಮ್ಮೆನಹಳ್ಳಿಯ ಒಂದುವರೆ ತಿಂಗಳ ಬಾಣಂತಿ ಅಕ್ಷಿತ ಇದೀಗ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ಐನೂರು ಗ್ರಾಮದಲ್ಲಿ ಅಕ್ಷಿತ ಸಾವನ್ನಪ್ಪಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

