ಬೆಳಗಾವಿ: ಇಲ್ಲಿನ ಕ್ಯಾಂಪ್ ಪ್ರದೇಶದ ಯೂನಿಯನ್ ಜಿಮ್ಖಾನಾದಲ್ಲಿ ಮಂಗಳವಾರ ನಡೆದ ವ್ಯಕ್ತಿಯೊಬ್ಬರ ಮೇಲೆ ಗುಂಡಿನ ದಾಳಿ ಪ್ರಕರಣ ಸಂಬಂಧ, ಒಬ್ಬನನ್ನು ಕ್ಯಾಂಪ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪುಣೆಯ ಕಾರು ಚಾಲಕ ರೋಹನ ಪೋಕಳೆ ಬಂಧಿತ. ‘ಯೂನಿಯನ್ ಜಿಮ್ಖಾನಾದಲ್ಲಿ ಸುರೇಶ ಜಾಲಗಾರ ಎಂಬಾತನ ಮೇಲೆ ಪ್ರಫುಲ್ ಪಾಟೀಲ ಮತ್ತಿತರರು ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ್ದರು. ಈ ಆರೋಪಿಗಳನ್ನು ಪುಣೆಯಿಂದ ಬೆಳಗಾವಿಗೆ ಕರೆತಂದು, ಪುಣೆಗೆ ಮರಳಿಬಿಟ್ಟ ಚಾಲಕ ರೋಹನ ಬಂಧಿಸಿದ್ದೇವೆ. ಪರಾರಿಯಾದ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದೇವೆ’ ಎಂದು ಮೂಲಗಳು ತಿಳಿಸಿವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

