Breaking News

“ಕನ್ನಡಿಗ ಆಯುಷ್‌ ಶೆಟ್ಟಿಗೆ ಯುಎಸ್‌ ಓಪನ್‌ ಬ್ಯಾಡ್ಮಿಂಟನ್ ಕಿರೀಟ”

ಭಾರತದ ಯುವ ಶಟ್ಲರ್‌, ಕನ್ನಡಿಗ ಆಯುಶ್‌ ಶೆಟ್ಟಿ ಚೊಚ್ಚಲ ಬಿಡಬ್ಲ್ಯುಎಫ್‌ ವರ್ಲ್ಡ್‌ ಟೂರ್‌ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅವರು ಯುಎಸ್‌ ಓಪನ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.ಬ್ರಿಯಾನ್‌ ಯಾಂಗ್‌ ವಿರುದ್ಧ 21-18, 21-13 ನೇರ ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಟೂರ್ನಿಯುದ್ದಕ್ಕೂ ವಿಶ್ವದ ಬಲಿಷ್ಠ ಆಟಗಾರರನ್ನು ಸೋಲಿಸಿದ್ದ ಆಯುಶ್‌, ಫೈನಲ್‌ನಲ್ಲಿ 47 ನಿಮಿಷಗಳಲ್ಲೇ ಪಂದ್ಯ ಗೆದ್ದರು. ಇದು ಯಾಂಗ್‌ ವಿರುದ್ಧ ಆಯುಶ್‌ಗೆ 3ನೇ ಗೆಲುವು. ಈ ವರ್ಷ ಮಲೇಷ್ಯಾ ಹಾಗೂ ತೈಪೆ ಓಪನ್‌ನಲ್ಲೂ ಜಯಗಳಿಸಿದ್ದರು.

Share News

About BigTv News

Check Also

ನಕಲಿ ಔಷಧ ಜಾಲ ಪತ್ತೆ : ಬೆಂಗಳೂರಿನ 5 ಕಡೆ ‘ED’ ದಾಳಿ : ಆರೋಪಿ ವೀರೇಶ್ ಬ್ಯಾಂಕ್ ಖಾತೆ ಫ್ರೀಜ್!

ಬೆಂಗಳೂರು: ನಕಲಿ ಔಷಧಿ ತಯಾರಿಕೆ ಮತ್ತು ಮಾರಾಟ ಜಾಲದ ವಿರುದ್ಧ ಇಡಿ ಅಧಿಕಾರಿಗಳು ಬೆಂಗಳೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ …

Leave a Reply

Your email address will not be published. Required fields are marked *