Breaking News

ಬ್ಯೂಟಿಪಾರ್ಲರ್‌ ಹೆಸರಿನಲ್ಲಿ ಸೆಕ್ಸ್‌ದಂಧೆ, ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯಿಂದಲೇ ಒತ್ತಾಯ, ಸಂತ್ರಸ್ತೆಯಿಂದ ಪೊಲೀಸರಿಗೆ ದೂರು

ಬ್ಯೂಟಿಪಾರ್ಲರ್‌ ಹೆಸರಿನಲ್ಲಿ ಮಾಲಕಿ ಸೆಕ್ಸ್‌ದಂಧೆ ನಡೆಸುತ್ತಿರುವ ವಿಚಾರ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಪುರುಷ ಗಿರಾಕಿಗಳೊಂದಿಗೆ ಸಹಕರಿಸಲು ಮಾಲಕಿಯೇ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಒಪ್ಪದಿದ್ದಾಗ ಹಲ್ಲೆಗೈದು ಅರೆನಗ್ನ ಫೋಟೊ ತೆಗೆದು ಬೆದರಿಕೆ ಒಡ್ಡಿದ್ದಾರೆಂದು ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಬಂದು ಅಳಲು ತೋಡಿಕೊಂಡಿದ್ದಾರೆ.ಸದ್ಯ ಸಂತ್ರಸ್ತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿಯವರಲ್ಲಿ ವಿಚಾರ ತಿಳಿಸಿದ್ದು, ಅದರಂತೆ ದೂರು ದಾಖಲಾಗಿದೆ. ಸಂಜೆ ವೇಳೆ ಸಂತ್ರಸ್ತೆಯೊಂದಿಗೆ ಮಹಿಳಾ ಪೊಲೀಸರು ಬೆರಳಚ್ಚು ತಜ್ಞರೊಂದಿಗೆ ಆಗಮಿಸಿ ಸಲೂನ್‌ನಲ್ಲಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಸಲೂನ್‌ಗೆ ಬೀಗ ಜಡಿಯಬೇಕಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *