ಮಂಟೂರ್ ರಸ್ತೆಯ ಅರಳಿಕಟ್ಟೆ ಎಂಬುಲ್ಲಿ ಘಟನೆ ನಡೆದಿದೆ.ಶವ ಸಂಸ್ಕಾರ ಮುಗಿಸಿ ವಾಪಸ್ ಆಗುವಾಗ ಎರಡು ಗುಂಪುಗಳ ನಡುವೆ ಜಗಳ ಆಗಿದೆ. ನಿಂದನೆ ಮಾಡಿ, ಗುರಾಯಿಸಿದ್ರು ಅಂತ ಆರಂಭವಾಗಿ ಹೊಡೆದಾಡಿ ಕೊಂಡಿದ್ದಾರೆ
ನಾಲ್ಕು ಜನರಿಗೆ ಗಾಯ ಆಗಿದೆ ಗಾಯಳುಗಳನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ಗುಂಪುಗಳು ಮೊದಲು ಜೊತೆಗಿದ್ದವರು
ನಂತರ ಪರಸ್ಪರ ದ್ವೇಷ ಬೆಳೆದಿತ್ತು
ಎರಡು ಕಡೆ ದೂರು – ಪ್ರತಿ ದೂರು ದಾಖಲಾಗಿದೆ.ಎರಡು ಕಡೆಯಿಂದ ನಾಲ್ಕೈರಿಂದ ಐದು ಜನರನ್ನ ವಶಕ್ಕೆ ಪಡೆದಿದ್ದೇವೆ
ತಳ್ಳಾಟದಿಂದ ಆರಂಭವಾದ ಜಗಳ ವಿಕೋಪಕ್ಕೆ ಹೋಗಿದೆ.ಗಲಾಟೆ ವೇಳೆ ಒಬ್ಬ ವ್ಯಕ್ತಿ ಕೈಯಲ್ಲಿ ಖಡ್ಗದಂತ ಮಾರಕಾಸ್ತ್ರ ಹಿಡಿದುಕೊಂಡಿದ್ದು ಕಂಡು ಬಂದಿದೆ.ಮಂಟೂರ್ ರಸ್ತೆಯ ಭಾಗದಲ್ಲಿ ಜನ ಜಾಸ್ತಿ ಇದ್ದಾಗ ಈ ರೀತಿ ಆಗುತ್ತೆ ಅಂತ ನಮ್ಮ ಸಿಬ್ಬಂದಿಯನ್ನ ಸಹ ನೇಮಕ ಮಾಡಲಾಗಿತ್ತು
ಸ್ಥಳದಲ್ಲಿದ್ದ ನಮ್ಮ ಸಿಬ್ಬಂದಿ ಎರಡು ಗುಂಪುಗಳ ಜಗಳ ಬಿಡಿಸಲು ಮುಂದಾಗಿದ್ರು
ಆ ವೇಳೆ ಕರ್ತವ್ಯಕ್ಕೆ ಅಡ್ಡಿ ಸಹ ಮಾಡಲಾಗಿದೆ
ಈ ಹಿನ್ನೆಲೆ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ.ಎರಡು ಗುಂಪುಗಳಲ್ಲಿ ಎಲ್ಲಾ ಜಾತಿಯವರಿದ್ದಾರ. ಈಗಾಗಲೇ ಸಿಸಿ ಟಿವಿ ಕ್ಯಾಮರಾ ಸಹ ಪರಿಶೀಲನೆ ಮಾಡಲಾಗಿದೆ
ಅಲ್ಲಿ ಮತ್ತೆ ಗಲಭೆ ಆಗದಂತೆ ಕ್ರಮ ಸಹ ಕೈಗೊಳ್ಳಲಾಗಿದೆ. ನಮ್ಮ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.ಗಲಾಟೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿ ಆದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.ಈಗಾಗಲೇ ಹುಬ್ಬಳ್ಳಿ ಧಾರವಾಡದಲ್ಲಿ ರೌಡಿ ಚಟುವಟಿಕೆ ಮಟ್ಟಹಾಕಲು 80 ಹೆಚ್ಚು ಜನರನ್ನ ಗಡಿ ಪಾರು ಮಾಡಿದ್ದೇವೆ
4 ಜನರ ಮೇಲೆ ಗುಂಡಾ ಕಾಯ್ದೆ ಜಾರಿ ಮಾಡಿದ್ದೇವೆ.ಈ ಪ್ರಕರಣದಲ್ಲಿ ಭಾಗಿ ಆದವರಲ್ಲಿ ರೌಡಿ ಶೀಟರ್ ಗಳು ಇದ್ದಾರಾ ಅಂತ ತನಿಖೆ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಎನ್ ಶಶಿಕುಮಾರ್ ಹೇಳಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

