Breaking News

ಹೊಟ್ಟೆಕಿಚ್ಚಿನಿಂದ ಸಂಸದರನ್ನೇ ಅಪರಾಧಗಳಿಗೆ ಗುರಿ ಮಾಡುವುದು ಸರಿಯಲ್ಲ : ಸುಮಾಲತಾ ಅಂಬರೀಷ್



ಮಂಡ್ಯ: ನರೇಗಾ ಎಂದರೆ ಏನು ಎಂಬುವುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅದರಲ್ಲಿ ಯಾವ ಕೆಲಸಗಳಿವೆ ಎನ್ನುವುದು ಜನಸಾಮಾನ್ಯರಿಗೆ ಗೊತ್ತಿಲ್ಲ. ಕೆಲವರು ಹೊಟ್ಟೆಕಿಚ್ಚಿನಿಂದ ಸಂಸದರನ್ನೇ ಅಪರಾಧಗಳಿಗೆ ಗುರಿ ಮಾಡುವುದು ಸರಿಯಲ್ಲ ಎಂದು ಸಂಸದೆ ಸುಮಾಲತಾ ಅಂಬರೀಷ್ ಮಂಡ್ಯದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಅವರನ್ನು ಶುಕ್ರವಾರ ಭೇಟಿ ಮಾಡಿ ನರೇಗಾ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ನಂತರ ಸುದ್ದಿಗಾರೊಂದಿಗೆ ಮಾತನಾಡಿದರು. ನರೇಗಾದಲ್ಲಿ ಏನೇನು ಮಾಡಿಸಬಹುದು ಎಂಬುದರ ನಿರ್ಧಾರವು ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪಿಡಿಒಗಳದ್ದಾಗಿರುತ್ತದೆ. ನಾವು ಅವರನ್ನು ಕೇಳಬಹುದು. ಜೊತೆಗೆ ಕೆಲಸ ಎಲ್ಲಿ ಆಗಬೇಕು ಎಂಬುವುದನ್ನು ತಿಳಿಸಬಹುದಷ್ಟೇ. ಸಂಸದರು ದಿಶಾ ಸಭೆಯಲ್ಲಿ ನಂಬರ್‌ ಒನ್ ಇದ್ದಾರೆ, ಆದರೆ ನರೇಗಾದಲ್ಲಿ ಹಿಂದಿದ್ದಾರೆ ಎಂದು ಹೇಳುವುದೇ ತಪ್ಪು ಕಲ್ಪನೆ ಎಂದು ತಿರುಗೇಟು ನೀಡಿದ್ದಾರೆ.

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *