ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಧರ್ಮಸ್ಥಳದಲ್ಲಿ ನಡೆದಿದ್ದ ಅತ್ಯಾಚಾರ, ಕೊಲೆಯಾದ ಶವಗಳನ್ನು ತಾನು ಹೂತಿದ್ದಾಗಿ ಹೇಳಿಕೊಂಡಿದ್ದು, ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಅವುಗಳನ್ನು ಪೊಲೀಸರ ಮುಂದೆ ಹೊರತೆಗೆದು ತೋರಿಸಿ ಶರಣಾಗುತ್ತೇನೆ ಎಂದು ಪತ್ರ ಬರೆದಿದ್ದಾನೆ ಹಾಗೂ ಸ್ವತಃ ಎಫ್‌ಐಆರ್ ಅನ್ನೂ ಸಹ ದಾಖಲಿಸಿದ್ದಾನೆ.ಇನ್ನು ಸೌಜನ್ಯ ಪ್ರಕರಣದಲ್ಲಿ ಸತ್ಯ ಒಪ್ಪಿಕೊಳ್ಳಲು ಸಿದ್ಧನಾಗಿ ಬಳಿಕ ನಿಗೂಢವಾಗಿ ಸಾವನ್ನಪ್ಪಿದ ರವಿ ಪೂಜಾರಿ ಈ ಭೀಮನಿಗೆ ಆಪ್ತ ಸ್ನೇಹಿತ. ಸೌಜನ್ಯ ಕೊಲೆಯ ಬಳಿಕ ಮದ್ಯಪಾನಕ್ಕೆ ದಾಸನಾಗಿದ್ದ ರವಿ ಪೂಜಾರಿ ಜತೆ ಮಾತನಾಡಿದ ಭೀಮನಿಗೆ ರವಿ ಪೂಜಾರಿ ದಣಿಗಳ ಮಗ ಮಾಡಿದ ಅತ್ಯಾಚಾರ ಕೊಲೆಗಳ ಶವಗಳನ್ನು ಬಿಸಾಡಲು ನಮಗೆ ದುಡ್ಡು ಕೊಟ್ಟರು ಎಂದು ಹೇಳಿಕೊಂಡಿದ್ದ.
ಹೀಗೆ ಇಬ್ಬರ ನಡುವೆ ಕೊಲೆಗಳ ಬಗ್ಗೆ ಮುಕ್ತ ಮಾತುಕತೆ ಆದ ಕೆಲವೇ ದಿನಗಳಲ್ಲಿ ರವಿ ಪೂಜಾರಿ ಕೊಲೆ ನಡೆಯಿತು. ಅಷ್ಟು ನಿಷ್ಟೆಯಿಂದ ಇದ್ದ ರವಿ ಪೂಜಾರಿಯನ್ನೇ ಕೊಂದುಹಾಕಿದ ಇವರು ತನ್ನನ್ನು ಉಳಿಸುತ್ತಾರಾ ಎಂದು ಭಯಕ್ಕೊಳಗಾಗಿ ಭೀಮ ಧರ್ಮಸ್ಥಳದಿಂದ ಬೇರೆ ರಾಜ್ಯಕ್ಕೆ ಪರಾರಿಯಾಗಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

