Breaking News

ಇನ್ಮೇಲೆ ಮಾಡು ಇಲ್ವೇ‌ ಮಡಿ ಚಳವಳಿ.. ಆ.೧೬ಕ್ಕೆ ಬೃಹತ್ ಸಮಾವೇಶ

ಉತ್ತರಕರ್ನಾಟಕದ ಮಂದಿ ಮಹದಾಯಿ ಕುಡಿಯೋ ನೀರಿನ ಯೋಜನೆಗಾಗಿ ಬಂದ್, ಧರಣಿ, ಸತ್ಯಾಗ್ರಹ, ಪಾದಯಾತ್ರೆ ಅಂತೆಲ್ಲ ಹೋರಾಡ್ತಿದಾರೆ. ದಯಾ ಮರಣವನ್ನೂ ಕೋರಿದ್ರು. ಆದ್ರೇ, ರಾಜಕೀಯ ಇಚ್ಛಾಶಕ್ತಿ ಇಲ್ಲದೇ ಈಗ ನ್ಯಾಯಾಧೀಕರಣದ ಅಂತಿಮ ತೀರ್ಪಿಗೆ ಕಾಯುವಂತಾಗಿದೆ. ತೀರ್ಪು ಪರ ಇಲ್ಲ ವಿರೋಧ ಬಂದ್ರೇ ಮುಂದಿನ ನಡೆ ಯಾವ ರೀತಿ ಇರ್ಬೇಕು ಅನ್ನೋದರ ಬಗ್ಗೆ ಚರ್ಚಿಸಲು ಹುಬ್ಬಳ್ಳಿಯಲ್ಲಿ ಹೋರಾಟಗಾರರು ಸಮಾವೇಶ ನಡೆಸಲು ನಿರ್ಧರಿಸಿದಾರೆ.
ರಾಜಕಾರಣಿಗಳದ್ದು ದಪ್ಪ ಚರ್ಮ. ಉತ್ತರಕರ್ನಾಟಕದ ಮಂದಿ ಇದನ್ನ ಯಾವುದೇ ಅಳುಕಿಲ್ಲದೇ ಹೇಳ್ತಾರೆ. ಅದಕ್ಕೆ ಕಾರಣ ಮಹದಾಯಿ ಕುಡಿಯೋ ನೀರಿನ ಯೋಜನೆಯ ವಿವಾದ. ನಾಲ್ಕು ದಶಕಗಳಿಂದ ಈ ಯೋಜನೆ ಜಾರಿ ಆಗ್ಬೇಕೆಂದು ಇಡೀ ಉತ್ತರಕರ್ನಾಟಕದ ಬಯಸ್ತಿದೆ. ಅದರಲ್ಲೂ ನಾಲ್ಕು ಜಿಲ್ಲೆ 9 ತಾಲೂಕಿನ ಜನ ಯಾವಾಗ ಮಹದಾಯಿ ನೀರು ಕುಡೀತೇವೋ ಅಂತ ಕಾಯ್ತಿದಾರೆ. ಇಷ್ಟಿದ್ರೂ ಆಳೋ ಯಾವುದೇ ಸರ್ಕಾರ ಇಲ್ಲ ಯಾವುದೇ ಪಕ್ಷ ಅಷ್ಟೇ ಯಾಕೆ ಯಾವೊಬ್ಬ ರಾಜಕಾರಿಣಿಯೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಎಲ್ರೂ ಉರಿಯೋ ಬೆಂಕಿಯಲ್ಲಿ ತುಪ್ಪ ಕಾಯಿಸಿಕೊಳ್ಳೋ ಕುತಂತ್ರಿಗಳೇ. ಹಾಗಾಗಿಯೇ ಈಗ ನಿರ್ಣಾಯಕ ಹಂತದ ಹೋರಾಟ ನಡೆಸ್ಬೇಕು ಅನ್ನೋದನ್ನ ಮಹದಾಯಿ ಹೋರಾಟಗಾರರು ಅರಿತಿದಾರೆ. 3 ವರ್ಷ ನಿರಂತರ ಹೋರಾಟ ನಡೆಸಿದ್ರೂ ಮಾತುಕತೆ ಮೂಲಕ ವಿವಾದ ಇತ್ಯರ್ಥಪಡಿಸಲೇ ಇಲ್ಲ. ಅವ್ರ್ ಮೇಲೆ ಇವ್ರ್ ಇವ್ರ್ ಮೇಲೆ ಅವ್ರ್ ಕೆಸರೆರಚಾಟ ನಡೆಸಿದ್ದೇ ಬಂತು. ಆದ್ರೇ, ನಿರೀಕ್ಷೆಯಿಂದ ಕಾದಿದ್ದ ಜನರಿಗೇ ಏನೂ ಧಕ್ಕಲಿಲ್ಲ. ಹೋರಾಟಗಾರರಿಗಂತೂ ಲಾಠಿ ಏಟಿನ ಜತೆಗೆ ಪೊಲೀಸ್ ಕೇಸ್ ಗಳು ಬೇರೆ ಬಿದ್ವು. ಯಾವ ರಾಜಕಾರಣಿ, ಪಕ್ಷಗಳನ್ನೂ ನಂಬೋ ಸ್ಥಿತಿಯಿಲ್ಲ. ಹಾಗಾಗಿಯೇ ಈಗ ಹೋರಾಟಗಾರರು ಮಹದಾಯಿ, ಕಳಸಾ ಬಂಡೂರಿ ಹೋರಾಟಗಾರರು ಆಗಸ್ಟ್ 16ಕ್ಕೆ ಹುಬ್ಬಳ್ಳಿಯಲ್ಲಿ ಮಾಡು ಇಲ್ಲವೇ ಮಡಿ ಅನ್ನೋ ಹೆಸರಿನಲ್ಲಿ ಸಮಾವೇಶ ನಡೆಸೋದಕ್ಕೆ ನಿರ್ಧರಿಸಿದಾರೆ. 
ಸುಭಾಷಗೌಡ ಪಾಟೀಲ, ಅಧ್ಯಕ್ಷ,ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ಈವರೆಗೂ ರಾಜ್ಯದ ಮೂರೂ ಪಕ್ಷಗಳೂ ಮಹದಾಯಿ ವಿವಾದ ಇತ್ಯರ್ಥಕ್ಕೆ ಹೆಚ್ಚು ಸ್ಪಂದಿಸಿಲ್ಲ ಅನ್ನೋದಂತೂ ಸ್ಪಷ್ಟ. ಈಗ ಆಗಸ್ಟ್ 21ಕ್ಕೆ ಇಲ್ಲ ಕಡೆ ವಾರದಲ್ಲಿ ಮಹದಾಯಿ ನ್ಯಾಯಾಧಿಕರಣದಲ್ಲಿ ಅಂತಿಮ ತೀರ್ಪು ಹೊರಬೀಳುವ ಸಾಧ್ಯತೆಯಿದೆ. ಮಹದಾಯಿ ತೀರ್ಪು ರಾಜ್ಯದ ಪರವಾಗಿ ಬರುವ ನಿರೀಕ್ಷೆ ಹೋರಾಟಗಾರರು ಸೇರಿ ರಾಜ್ಯದ ಎಲ್ಲ ಜನ್ರೂ ಹೊಂದಿದಾರೆ. ಆದ್ರೇ, ನ್ಯಾಯಾಧಿಕರಣದಲ್ಲಿ ರಾಜ್ಯದ ಹಿತಾಸಕ್ತಿಗೆ ಧಕ್ಕೆ ಆಗೋ ರೀತಿ ವ್ಯತಿರಿಕ್ತ ತೀರ್ಪು ಬಂದ್ರೇ ಈ ಸಾರಿ ‘ಮಾಡು ಇಲ್ಲವೇ ಮಡಿ’ ಹೋರಾಟ ನಡೆಸೋದಕ್ಕೆ ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ನಿರ್ಧರಿಸಿದೆ. ಅದಕ್ಕಾಗಿಯೇ ಮೂರೂ ಪಕ್ಷಗಳನ್ನೂ ಹುಬ್ಬಳ್ಳಿಯ ಸಮಾವೇಶಕ್ಕೆ ಬರಬೇಕು ಅಂತ ಮನವಿ ಮಾಡಲಾಗಿದೆ. ಇದರ ಜತೆಗೆ ಕೂಡಲಸಂಗಮ ಪಂಚಮಸಾಲಿಮಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ, ಮುಂಡರಗಿಯ ತೋಂಡದಾರ್ಯಮಠದ ಶ್ರೀ ನಿಜಗುಣಪ್ರಭು ಸ್ವಾಮೀಜಿ, ಮಣಕವಾಡದ ಶ್ರೀ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಮತ್ತಿತರ ಮಠಾಧೀಶರ ನೇತೃತ್ವದಲ್ಲಿಯೇ ಸಮಾವೇಶ ನಡೀತಿರೋದು ವಿಶೇಷ.  ಮಹದಾಯಿ ನೀರು ಮಹಾತಾಯಿ ಮಲಪ್ರಭೆಗೆ ಸೇರ್ಬೇಕು ಅನ್ನೋದು ಈ ಭಾಗದ ಪ್ರತಿಯೊಬ್ಬರ ಕೂಗು. ಅದಕ್ಕಾಗಿಯೇ ರೈತ, ಕಾರ್ಮಿಕ, ವಿದ್ಯಾರ್ಥಿ, ಪ್ರಗತಿಪರ, ದಲಿತರಪರ ಸಂಘಟನೆಗಳೂ ಸಹ ಆದಿನ ಸಮಾವೇಶದಲ್ಲಿ ಪಾಲ್ಗೊಳ್ತಿವೆ. ಜತೆಗೆ ನ್ಯಾಯಾಧಿಕರಣದ ತೀರ್ಪಿನ ಸಾಧ್ಯತೆಗಳ ಕುರಿತು ಚರ್ಚೆ ನಡೆಯಲಿದೆ. ವ್ಯತಿರಿಕ್ತ ತೀರ್ಪು ಬಂದ್ರೇ ಯಾವ ರೀತಿ ಕಾನೂನು ಸೇರಿದಂತೆ ಯಾವ ಯಾವ ರೀತಿಯಲ್ಲಿ ಹೋರಾಟ ನಡೆಸ್ಬೇಕು ಅನ್ನೋದರ ಕುರಿತಂತೆ ಸಮಾವೇಶದಲ್ಲೇ ನಿರ್ಣಯ ಕೈಗೊಳ್ಳಲಾಗ್ತಿದೆ. 
ಅಮೃತ ಇಜಾರಿ, ಮಹದಾಯಿ ಹೋರಾಟಗಾರ
ಮುಂಚೂಣಿಯಲ್ಲಿರೋ ನಾಲ್ಕು ಸಂಘಟನೆಗಳು, ಹತ್ತಾರು ಮಂದಿ ಹೋರಾಟಗಾರರಿಗಷ್ಟೇ ಮಹದಾಯಿ ನೀರು ಬೇಕಾಗಿಲ್ಲ. ಇದು ಇಡೀ ಉತ್ತರಕರ್ನಾಟಕದ ಜನರ ನ್ಯಾಯ ಸಮ್ಮತ ಹಕ್ಕು. ಇದೇ ಹಕ್ಕಿಗಾಗಿ ಪ್ರತಿಯೊಬ್ಬರಲ್ಲೂ ಹೋರಾಟದ ಮನೋಭಾವ ಬೇಕಿದೆ. ರಾಜಕೀಯ ಇಚ್ಛಾಶಕ್ತಿಯಿರದ ನಿರ್ಲಜ್ಜ ನಾಯಕರುಗಳಿಂದ ನಯಾಪೈಸೆ ಲಾಭವಂತೂ ಆಗೋದಿಲ್ಲ. ಮಹದಾಯಿ ಜನಾಂದೋಲನವಾದ್ರೇ ಮಾತ್ರ ಇದರಲ್ಲಿ ಯಶಸ್ವಿಯಾಗೋದಕ್ಕೆ ಸಾಧ್ಯ ಅನ್ನೋದಂತೂ ಸೂರ್ಯ-ಚಂದ್ರರಷ್ಟೇ ಸತ್ಯ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *