ಅಮೃತಸರ, ಬೆಂಗಳೂರು: ಭಾರತದ ಪಂಜಾಬ್ ಗಡಿ ಭಾಗದಲ್ಲಿ ನೆರೆ ದೇಶ ಚೀನಾ ಮತ್ತೆ ಖ್ಯಾತೆ ತೆಗೆಯಲು ಮುಂದಾಗಿದೆ. ದೇಶದ ಜನರು ದೀಪಾವಳಿ ಸಡಗರದಲ್ಲಿರುವ ಸಂದರ್ಭದಲ್ಲಿ ಗಡಿಯಲ್ಲಿ ಚೀನಾ ನಿರ್ಮಿತ ಡ್ರೋನ್ ಹಾರಾಟ ನಡೆಸಿದ್ದು, ಅದನ್ನು ವಶಕ್ಕೆ ಪಡೆಯಲಾಗಿದೆ.ನವೆಂಬರ್ 12ರಂದು ಭಾನುವಾರ ಬೆಳಗ್ಗೆ ಪಂಜಾಬ್ ರಾಜ್ಯದ ಅಮೃತಸರದ ನೆಸ್ತಾ ಗ್ರಾಮದಲ್ಲಿ ಡ್ರೋನ್ ಹಾರಾಡಿದೆ. ಕೂಡಲೇ ಅಲರ್ಟ್ ಆದ ಗಡಿ ಭದ್ರತಾ ಪಡೆ (BSF) ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡವು ಕಾರ್ಯಾಚರಣೆ ನಡೆಸಿ ಡ್ರೋನ್ ವಶಕ್ಕೆ ಪಡೆಯಲಾಗಿದೆ ಎಂದು ಅಧಕಾರಿಗಳು ಮಾಹಿತಿ ನೀಡಿದ್ದಾರೆ.ಪಂಜಾಬ್ ಮೂಲಗಳ ಪ್ರಕಾರ, ರಾಜ್ಯದ ಅಮೃತಸರದ ನೆಸ್ಟಾ ಗ್ರಾಮದ ಹೊರವಲಯದಲ್ಲಿ ಚೀನಾ ನಿರ್ಮಿತ ಕ್ವಾಡ್‌ಕಾಪ್ಟರ್ ಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಬೆಳಗಿನ ಸಮಯದಲ್ಲಿ ಡ್ರೋನ್ ಇರುವಿಕೆಯ ಬಗ್ಗೆ ನಿರ್ದಿಷ್ಟ ಮಾಹಿತಿ ಪಡೆದ ಅಧಿಕಾರಿಗಳು ಜಂಟಿ ಶೋಧ ನಡೆಸಲು ಆರಂಭಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

