ದಾವಣಗೆರೆ: ಇಂದು ಬೆಳಿಗ್ಗೆ ಬಿಜೆಪಿಯವರು ನನ್ನನ್ನು ಸಂಪರ್ಕಿಸಿದ್ದರು. ಆದರೆ ನಾನು ಅವರ ಲಾಭಿಗೆ ಮಣಿದಿಲ್ಲ. ನಾನು ಯಾವುದೆ ಕಾರಣಕ್ಕು ರಾಜೀನಾಮೆ ಕೊಡಲ್ಲ ಎಂದು ಹರಿಹರ ಕಾಂಗ್ರೇಸ್ ಶಾಸಕ ಎಸ್ ರಾಮಪ್ಪ ಹೇಳಿದರು. ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕು ಸರ್ಕಾರ ಬೀಳಲ್ಲ. ಆದ್ರೆ ಸಿಎಂ ಬದಲಾವಣೆಯಾಗತ್ತೆಇದೆಲ್ಲವನ್ನು ಬಿಜೆಪಿಯವರೆ ಮಾಡಿದ್ದಾರೆ.ಒಂದು ವರ್ಷದಿಂದ ಇದೇ ರೀತಿ ಮಾಡುತ್ತಿದ್ದಾರೆ.ಇಂದು ನನಗೂ ಪೋನ್ ಮಾಡಿದ್ದರು.ನಾನು ಯಾವುದೇ ಹಣ, ಅಧಿಕಾರಕ್ಕೆ ಮನಸೋತಿಲ್ಲನನಗೆ ಕ್ಷೇತ್ರದ ಜನರು ಮುಖ್ಯ.ನಾನು ಅವರಿಗೆ ಗೌರವ ನೀಡುತ್ತೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





