ಕೆಎಸ್‌ಆರ್‌ಟಿಸಿ ಬಸ್ ಫುಲ್ ರಶ್ ಆದ ಕಾರಣ ಉಸಿರುಗಟ್ಟಿ ಮಹಿಳೆಯೊಬ್ಬರು ಕೂಗಿಕೊಂಡ ಘಟನೆ ತುಮಕೂರಿನ ಕುಣಿಗಲ್ ಪಟ್ಟಣದಲ್ಲಿ ನಡೆದಿದೆ.ಅಯ್ಯಯ್ಯೋ ನನ್ನನ್ನು ಕಾಪಾಡಿ.. ಬಸ್ಸಿನಿಂದ ಕೆಳಗಿಳಿಸಿ ಎಂದು ಮಹಿಳೆ ಕೂಗಿಕೊಂಡಿದ್ದಾಳೆ. ಮಹಿಳೆಯ ಪರಿಸ್ಥಿತಿ ನೋಡಿ ತಕ್ಷಣವೇ ಎಚ್ಚೆತ್ತ ಕಂಡಕ್ಟರ್, ಬಸ್ಸ್ಸ್ ನಿಲ್ಲಿಸಿ ಮಹಿಳೆಯನ್ನು ಕೆಳಗಿಳಿಸಿದ್ದಾರೆ.ಕರ್ನಾಟಕದಲ್ಲಿ ಈ ಯೋಜನೆ ಪ್ರಾರಂಭವಾದಾಗಿನಿಂದ 474 ಕೋಟಿಗೂ ಹೆಚ್ಚು ಉಚಿತ ರೈಡ್‌ಗಳನ್ನು ಮಹಿಳೆಯರು ಮಾಡಿದ್ದಾರೆ. ಅದರಲ್ಲೂ 2023ರ ನವೆಂಬರ್ 11ರಿಂದ ಮತ್ತು ನಿನ್ನೆಯವರೆಗೆ ಸರಾಸರಿ 474 ಕೋಟಿ ಮಹಿಳೆಯರು ಶಕ್ತಿ ಯೋಜನೆಯಡಿಯಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಸರ್ಕಾರ ವರದಿ ಬಿಡುಗಡೆ ಮಾಡಿದೆ.ಇನ್ನು ಸಾರಿಗೆ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಮಹಿಳೆಯರ 474 ಕೋಟಿ ಉಚಿತ ರೈಡ್‌ಗಳ ಒಟ್ಟು ಟಿಕೆಟ್ ಮೌಲ್ಯವು 11,994 ಕೋಟಿ ಎಂದು ಸರ್ಕಾರ ಹೇಳಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

