Breaking News

ದೇವಸ್ಥಾನದಲ್ಲಿ ಬೆಲೆಬಾಳುವ ವಸ್ತುಗಳನ್ನು ಕದ್ದು, ಅಲ್ಲೇ ನಿದ್ದೆಗೆ ಜಾರಿದ ಕಳ್ಳ!!

ಯುವಕನೊಬ್ಬ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿ, ಮದ್ಯದ ಅಮಲಿನಲ್ಲಿ ನಿದ್ದೆಗೆ ಅಲ್ಲೇ ಜಾರಿದ್ದನು. ಬೆಳಗ್ಗೆ ದೇವಸ್ಥಾನಕ್ಕೆ ಬಂದ ಅರ್ಚಕರು ಮತ್ತು ಸ್ಥಳೀಯರು ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆ ಜಾರ್ಖಂಡ್‌ನ ನೊಮುಂಡಿಯಲ್ಲಿ ನಡೆದಿದೆ.ಕದ್ದ ವಸ್ತುಗಳನ್ನು ತುಂಬಿಕೊಂಡು ದೇವಾಲಯದಿಂದ ಓಡಿಹೋಗಲು ಅವನು ತಯಾರಿ ನಡೆಸುತ್ತಿದ್ದಾಗ, ಕುಡಿದ ಮತ್ತಿನಲ್ಲಿ ಆತ ಅಲ್ಲೇ ನಿದ್ರೆಗೆ ಜಾರಿದ್ದಾನೆ.ನಾಯಕ್ ಗರ್ಭಗುಡಿಯಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ದೇವರ ಕಿರೀಟ ಸೇರಿದಂತೆ ಹಲವಾರು ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿದ್ದಾನೆ. ಇದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *