ವರದಿಗಾರರು ಅಪಾಯಕಾರಿ ಸ್ಥಳಗಳಿಗೆ ಇಳಿದು ಪ್ರತ್ಯಕ್ಷ ವರದಿ ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲೊಬ್ಬ ನದಿಗೆ ಇಳಿದು ವರದಿ ಮಾಡುತ್ತಿದ್ದ ವೇಳೆ ಆಘಾತಕಾರಿ ಘಟನೆ ನಡೆದಿದೆ.13 ವರ್ಷದ ಬಾಲಕಿಯೊಬ್ಬಳು ನದಿಯಲ್ಲಿ ಈಜುತ್ತಿದ್ದ ವೇಳೆ ನಾಪತ್ತೆಯಾಗಿದ್ದಳು.ಘಟನೆಯ ಬಗ್ಗೆ ವರದಿಗಾರನೋರ್ವ ನದಿಗೆ ಇಳಿದು ವರದಿ ಮಾಡುತ್ತಿದ್ದ. ಈ ನದಿ ಎಷ್ಟು ವಿಶಾಲವಾಗಿದೆ. ಆಳವಾಗಿದೆ ಎಂಬುದನ್ನು ಆತ ಲೈವ್ ರಿಪೋರ್ಟಿಂಗ್ ಮೂಲಕ ತಿಳಿಸುತ್ತಿದ್ದ ಅಷ್ಟರಲ್ಲೇ ನಾಪತ್ತೆಯಾಗಿದ್ದ ಬಾಲಕಿಯ ಶವ ನೀರಿನಲ್ಲಿ ತೇಲುತ್ತಾ ಆತನ ಕಾಲಿನ ಕೆಳಗೆ ಬಂದಿದ್ದು, ಅಕ್ಷರಶಃ ವರದಿಗಾರ ಭಯ ಬಿದ್ದಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

