ಕುಂದಾಪುರ: ಅನಧಿಕೃತವಾಗಿ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯನ್ನು ಯಾವುದೇ ಪರವಾನಿಗೆ ಪಡೆಯದೇ, ನಿಯಮ ಪಾಲಿಸದೇ ಸೆಕ್ಯೂರಿಟಿಗಳನ್ನು ನೇಮಿಸಿ ಅಪರಾಧ ಎಸಗಿರುವ ಬಗ್ಗೆ ವಡೇರಹೋಬಳಿ ನಾಯ್ಕರಬೆಟ್ಟಿನ ನಿವಾಸಿ ಅಣ್ಣಪ್ಪಯ್ಯ ಯು.ಎಲ್. ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅನಧಿಕೃತವಾಗಿ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಪ್ರೈವೇಟ್ ಸೆಕ್ಯೂರಿಟಿ ಏಜೆನ್ಸಿ ಹೆಸರಿನಲ್ಲಿ ಉಡುಪಿ, ಉತ್ತರಕನ್ನಡ, ಹಾವೇರಿ ಜಿಲ್ಲೆಗಳ ವಿವಿಧ ಕಡೆಗಳಲ್ಲಿ ಭದ್ರತಾ ಸಿಬಂದಿ ನಿಯೋಜಸಿದ್ದಾನೆ. ಈ ಹಿಂದೆ ಪರವಾನಿಗೆ ಪಡೆದು, ಕುಂದೇಶ್ವರ ಸೆಕ್ಯೂರಿಟಿ ಏಜೆನ್ಸಿ ಎಂಬ ಭದ್ರತಾ ಏಜೆನ್ಸಿ ನಡೆಸುತ್ತಿದ್ದು, ಅದರ ಪರವಾನಿಗೆ 2016ರ ಜ.18 ಕ್ಕೆ ಮುಕ್ತಾಯಗೊಂಡಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕುವಾಗ ಅಣ್ಣಪ್ಪಯ್ಯ ಪರವಾನಿಗೆ ಮುಗಿದರೂ ಸಹ ಮಾರಿಕಾಂಬಾ ಸೆಕ್ಯೂರಿಟಿ ಏಜೆನ್ಸಿ ಎಂಬ ಖಾಸಗಿ ಸೆಕ್ಯೂರಿಟಿ ಏಜೆನ್ಸಿ ನಡೆಸಿಕೊಂಡು, ಸೆಕ್ಯೂರಿಟಿಗಳನ್ನು ನೇಮಿಸಿರುವುದು ಬೆಳಕಿಗೆ ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

