Breaking News

ಗೂಂಡಾ ಕಾಯ್ದೆ ಅಡಿ ಬಂಧನದ ಆದೇಶವನ್ನು ಎತ್ತಿ ಹಿಡಿದ ಮಾನ್ಯ ಉಚ್ಛ ನ್ಯಾಯಾಲಯದ ಸಲಹಾ ಮಂಡಳಿ…

ನಾನೇ.. ನಂದೇ ಹವಾ ಅಂತ ಮೇರೆದವರು ಕಂಬಿ ಹಿಂದೆ

ಕಮೀಷನರ್ ಈ ಕ್ರಮಕೆ ಸೈ ಎಂದ ಉಚ್ಚ ನ್ಯಾಯಾಲಯ

ಕಮೀಷನರ್ ಗೆ ಶಬ್ಬಾಶ್ ಎಂದ ಮಹಾ ನಿರೀಕ್ಷಕರು

ಹುಬ್ಬಳ್ಳಿ ಧಾರವಾಡ ಅವಳಿ ನಗರದ ರೌಡಿ ಶೀಟರ್ ಗಳಾದ 1.ಸಾಗರ್ ಲಕ್ಕುಂಡಿ, 28 ವರ್ಷ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ 2.ಲಕ್ಷ್ಮಣ್ ಗಭ್ಯಾ ಬಳ್ಳಾರಿ, 30 ವರ್ಷ, ಬೆಂಡಿಗೇರಿ ಪೊಲೀಸ್ ಠಾಣೆ 3.ಮಂಜುನಾಥ್ ಸೈಂಟಿಸ್ಟ್ ಮಂಜ ಭಂಡಾರಿ 36 ವರ್ಷ ಕೇಶ್ವಾಪುರ ಪೊಲೀಸ್ ಠಾಣೆ 4.ದಾವೂದ್ ನದಾಫ್, 32 ವರ್ಷ ಶಹರ ಪೊಲೀಸ್ ಠಾಣೆ ಹುಬ್ಬಳ್ಳಿ..

ಹುಬ್ಬಳ್ಳಿ – ಧಾರವಾಡ ಗೂಂಡಾ ಕಾಯ್ದೆ 1985 ಅಡಿಯಲ್ಲಿ ಒಂದು ವರ್ಷದ ಅವಧಿವರೆಗೆ ವಿವಿಧ ಕಾರಗೃಹಗಳಲ್ಲಿ ಇಡಲು ಬಂಧನ ಆಜ್ಞೆ ಹೊರಡಿಸಿದ್ದರು. ರೌಡಿ ಶೀಟರ್ ಗಳು ತಮಗೆ ನೀಡಿದ ಜಮೀನು ಷರತ್ತುಗಳನ್ನು ಮತ್ತು ಉತ್ತಮ ರೀತಿಯಲ್ಲಿ ಬದುಕಲು ನೀಡಿರುವ ಅವಕಾಶಗಳನ್ನು ಉಲ್ಲಂಘಿಸಿ ತಲೆಮರೆಸಿಕೊಂಡು ನಿರಂತರ ಸಾರ್ವಜನಿಕ ಶಾಂತಿ, ಸುವ್ಯವಸ್ಥೆಗೆ ಇವರುಗಳು ಮಾರಕವಾಗಿರುವುದರಿಂದ ಪೊಲೀಸ್ ಆಯುಕ್ತರು ಮಾಡಿರುವ ಆದೇಶವನ್ನು ಎತ್ತಿ ಹಿಡಿದು ಒಂದು ವರ್ಷದ ಅವಧಿಯವರೆಗೆ ಬಂಧನ ಆಜ್ಞೆಯನ್ನು ಮುಂದುವರಿಸಿ ಆದೇಶಿಸಿರುತ್ತದೆ. ಈ ವಿಷಯವಾಗಿ ಮಾನ್ಯ ಪೊಲೀಸ್ ನಿರ್ದೇಶಕರು ಮತ್ತು ಮಹಾನಿರೀಕ್ಷಕರು ಬೆಂಗಳೂರು ರವರು ಪೊಲೀಸ್ ಆಯುಕ್ತರ ಕ್ರಮವನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Share News

About Shaikh BigTv

Check Also

ಖಾಸಗಿ ಜಾಗದಲ್ಲಿ ರಸ್ತೆ ನಿರ್ಮಾಣ ಪ್ರಶ್ನಿಸಿದ್ದಕ್ಕೆ ಹಲ್ಲೆ-

ಬೆಂಗಳೂರು ಉತ್ತರ ತಾಲೂಕಿನ ಕಾಡಸೊಣ್ಣಪನಹಳ್ಳಿ ಗ್ರಾಮದಲ್ಲಿ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದನ್ನು ಪ್ರಶ್ನಿಸಿದ ಕುಟುಂಬದವರ ಮೇಲೆ ಗುಂಪೊಂದು …

Leave a Reply

Your email address will not be published. Required fields are marked *