Breaking News

ಸೈನಿಕನನ್ನು ಕೊಲೆ ಮಾಡಿದ ಲೀವ್ ಇನ್ ರಿಲೇಷನ್​ ಶಿಪ್​ನಲ್ಲಿದ್ದ ಗೆಳತಿ!

ಲಿವಿಂಗ್ ಇನ್ ರಿಲೇಷನ್​​ಶಿಪ್​ನಲ್ಲಿದ್ದ ಗೆಳತಿಯೊಬ್ಬಳು ತನ್ನ ಗೆಳಯನನ್ನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ನಜೀಬಾಬಾದ್​ನ ಆದರ್ಶನಗರದಲ್ಲಿ ಬೆಳಕಿಗೆ ಬಂದಿದೆ.ಅಮಿತ್ ಸಾಗರ್ ಮತ್ತು ಮಮತಾ ಕಳೆದ ಮೂರು ವರ್ಷಗಳಿಂದ ಲಿವಿಂಗ್ ರಿಲೇಷನ್​ಶಿಪ್​ನಲ್ಲಿದ್ದರು. ಈ ವೇಳೆ ಅಮಿತ್ ಸಾಗರ್​ ಹಾಗಾಗ ಕುಡಿದು ಬಂದು ಮಮತಾ ಮೇಲೆ ಹಲ್ಲೆ ಮಾಡುತ್ತಿದ್ದ. ಈತನ ಕಿರುಕುಳ ತಾಳಲಾರದೇ ಕೊಲೆ ಮಾಡಿರುವುದಾಗಿ ಪೊಲೀಸ್​ ತನಿಖೆಯಿಂದ ಬಹಿರಂಗವಾಗಿದೆ. ಅಲ್ಲದೆ, ಗೆಳೆಯನನ್ನು ಕೊಲೆ ಮಾಡಿ ಸಹಜ ಮೃತ ಎಂದು ಬಿಂಬಿಸಲು ಆಸ್ಪತ್ರೆಗೆ ಸೇರಿಸಿದ್ದಳು ಎಂದು ನಜೀಬಾಬಾದ್ ಸರ್ಜಲ್ ಇನ್ಸ್​ಪೆಕ್ಟರ್ ನಿತೇಶ್ ಪ್ರತಾಪ್ ಸಿಂಗ್ ಹೇಳಿದ್ದಾರೆ.ಮಮತಾಳನ್ನು ಪೊಲೀಸರು ಬಂಧಿಸಿದ್ದಾರೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *