Breaking News

ಪಂಚಮಸಾಲಿ ಮೀಸಲಾತಿ ಹೆಸರಲ್ಲಿ ಯತ್ನಾಳ, ಸ್ವಾಮೀಜಿ ದೊಡ್ಡ ಡೀಲ್!!

ಹುಬ್ಬಳ್ಳಿ: ಯತ್ನಾಳ ಜೊತೆ ಸೇರಿ ಚುನಾವಣೆ ಸ್ಪರ್ಧಿಸಲು ಜಯ ಮೃತ್ಯುಂಜಯ ಸ್ವಾಮೀಜಿ ತಯಾರಿ ನಡೆಸಿದ್ದಾರೆ.2D, 2C. ಡಿಲ್ ಮಾಡಿಕೊಂಡಿದಕ್ಕೆ ಸ್ವಾಮೀಜಿ ವೈಯಕ್ತಿಕ ಆಸ್ತಿ ಮಾಡಿಕೊಂಡಿದ್ದಾರೆ. ದಾವಣಗೆರೆಯಲ್ಲಿ ವೈಯಕ್ತಿಕ ಶಿಕ್ಷಣ ಸಂಸ್ಥೆ ಮಾಡಿಕೊಂಡಿದ್ದಾರೆ. ಕೋಟ್ಯಾಂತರ ರೂಪಾಯಿ ಆಸ್ತಿ‌ ಮಾಡಿಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ನಡೆಸಿದರು. ಸಂಸ್ಥಾಪಕ ಅಧ್ಯಕ್ಷರ ಬಗ್ಗೆ ಅತ್ಯಂತ ಬಹಳ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಹಂದಿ, ನಾಯಿ‌ ನರಿ ಅಂತ ಭಾಷೆ ಬಳಸ್ತಾರೆ. ಅದು ಅವರ ಸಂಸ್ಕೃತಿ, ಆ ಸಂಸ್ಕೃತಿ ನೋಡಿಯ ಅವರ ಪಕ್ಷದವರು ಉಚ್ಚಾಟನೆ ಮಾಡಿದ್ದಾರೆ. ಸ್ವಯಂ ಘೋಷಿತ ನಾಯಕರು, ನಾನೇ ಮುಂದಿನ ಮುಖ್ಯಮಂತ್ರಿ, ನಾನೇ ನಾಯಕ ಅಂತ ಹೊರಟ್ಟಿದ್ದಾರೆ. ಮುಂದೆ ಇವರು ಮುಖ್ಯಮಂತ್ರಿ ಆಗ್ತಾರೋ, ಮಾಜಿಯಾಗಿ ಮನೆಯಲ್ಲಿ ಕೂಡ್ತಾರೋ ನೋಡೊಣ ಎಂದು ಕಿಡಿಕಾರಿದರು.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *