ಕಾಂಗ್ರೆಸ್ ಶಾಸಕರ ಕಚೇರಿ ಆವರಣದಲ್ಲಿ ರೈತ ದಂಪತಿ ಎಮ್ಮೆಗಳನ್ನು ಕಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ದಂಪತಿ ಭೂಪಾಲಪಲ್ಲಿಯ ಕಾಂಗ್ರೆಸ್ ಶಾಸಕ ಗಂದ್ರ ಸತ್ಯನಾರಾಯಣ ಅವರ ಕಚೇರಿಯ ಆವರಣದಲ್ಲಿ ಎಮ್ಮೆಗಳನ್ನು ಕಟ್ಟಿದ್ದಾರೆ.ಅವರು ತಮ್ಮ ಮನೆಯ ಕೊಟ್ಟಿಗೆಯನ್ನು ಕೆಡವಲು ಅವರೇ ಕಾರಣ ಎಂದು ಆರೋಪಿಸಿದ್ದಾರೆ.ಶಾಸಕರು ಹೇಳಿದ ಕಾರಣ ಸ್ಥಳೀಯ ಅಧಿಕಾರಿಗಳು ಕೆಡವಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಎಮ್ಮೆಗಳಿಗೆ ಆಶ್ರಯವಿಲ್ಲದ ಕಾರಣ ಇಲ್ಲಿ ಕಟ್ಟಿಹಾಕುವ ನಿರ್ಧಾರ ಮಾಡಿದ್ದೇವೆ ಎಂದು ಹೇಳಿದ್ದಾರೆ. ಎಮ್ಮೆಗಳಿಗೆ ಹೊಸ ಶೆಡ್ ನಿರ್ಮಿಸುವವರೆಗೆ ಅವುಗಳನ್ನು ಇಲ್ಲಿಯೇ ಕಟ್ಟಿಹಾಕುತ್ತೇವೆ ಎಂದು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

