Breaking News

ಸುಕ್ಮಾ: ನಾಲ್ವರು ನಕ್ಸಲರ ಶರಣು

ಸುಕ್ಮಾ (ಛತ್ತೀಸಗಢ): ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ನಕ್ಸಲರು ಶರಣಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಸೋಧಿ ಜೋಗಾ, ಡಾಬರ್ ಗಂಗಾ, ಸೋಧಿ ರಾಜೆ, ಮಾಧವಿ ಬುಧರಿ ಶರಣಾಗತರಾದವರು. ಸೋಧಿ ಜೋಗಾ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ಘೋಷಿಸಿದ್ದರೆ, ಉಳಿದ ಮೂವರ ಸುಳಿವು ನೀಡಿದವರಿಗೆ ತಲಾ ₹1 ಲಕ್ಷ ಬಹುಮಾನ ಘೋಷಿಸಲಾಗಿತ್ತು. ಸರ್ಕಾರದ ಶರಣಾಗತಿ ಯೋಜನೆಯಡಿ ಬಸ್ತಾರ್‌ನ ದಕ್ಷಿಣ ವಿಭಾಗದ ಕಿಸ್ತಾರಾಂ ಪ್ರದೇಶ ಸಮಿತಿಯ ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳೊಂದಿಗೆ ಶರಣಾಗತರಾಗಿದ್ದಾರೆ ಎಂದು ಬಸ್ತಾರ್‌ ವಲಯದ ಐಜಿ ಸುಂದರ್‌ರಾಜ್‌ ಪಿ. ಮಾಹಿತಿ ನೀಡಿದ್ದಾರೆ. ಶರಣಾದ ನಕ್ಸಲರಿಗೆ ಸರ್ಕಾರದ ನೀತಿಯಡಿ ಪುನರ್‌ವಸತಿ ಸೇರಿದಂತೆ ಆರ್ಥಿಕ ನೆರವು ನೀಡಲಾಗುವುದು ಎಂದಿದ್ದಾರೆ.

Share News

About BigTv News

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *