Breaking News

ವೇತನ ಪರ್ಸಂಟೇಜ್‌ ಹೆಚ್ಚಳಕ್ಕೆ ಆಳದೋಣಿ ಮೀನುಗಾರ ಕಾರ್ಮಿಕರ ಆಗ್ರಹ

ಆಳದೋಣಿ ಮೀನುಗಾರಿಕೆಯಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮೀನುಗಾರರ ವೇತನ ಹೆಚ್ಚಿಸಬೇಕು ಎಂದು ಆಗ್ರಹಿಸಿ ಮೀನುಗಾರ ಕಾರ್ಮಿಕರು ಪ್ರತಿಭಟನೆ ಆರಂಭಿಸಿದ್ದು, ವೇತನ ಹೆಚ್ಚಳ ಮಾಡುವವರೆಗೂ ಮೀನುಗಾರಿಕೆಗೆ ಬರುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.ಮಲ್ಪೆ ಬಂದರಿನಲ್ಲಿರುವ ಆಳದೋಣಿಗಳಲ್ಲಿ ಮೀನುಗಾರರಾಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಕುಮಟಾ, ಹೊನ್ನಾವರ, ಮಂಕಿ, ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನವರು ಹೆಚ್ಚಿದ್ದಾರೆ. ಈಗ ಹೊರ ರಾಜ್ಯದ ಕಾರ್ಮಿಕರು ಸೇರಿಕೊಂಡಿದ್ದಾರೆ. ಆದರೆ ಪೂರ್ಣ ಹೊರರಾಜ್ಯದ ಕಾರ್ಮಿಕರ ಮೂಲಕವೇ ಆಳದೋಣಿ ಮೀನುಗಾರಿಕೆ ನಡೆಸಲು ಮಾಲಕರಿಗೆ ಹಾಗೂ ತಾಂಡೇಲರಿಗೆ ಕಷ್ಟಸಾಧ್ಯ. ಹೀಗಾಗಿ ಸ್ಥಳೀಯರು ಬೇಕು. ಮೀನುಗಾರ ಕಾರ್ಮಿಕರಿಗೆ ಕೊಡುವ ವೇತನ ಪರ್ಸಂಟೇಜ್‌ ಕಡಿಮೆಯಿದೆ. ಅದನ್ನು ಹೆಚ್ಚಿಸಬೇಕು ಎಂದು ಪ್ರತಿಭಟನೆ ಆರಂಭಿಸಿದ್ದಾರೆ.

Share News

About BigTv News

Check Also

ಅನ್ಯಕೋಮಿನ ಪಾಗಲ್ ಪ್ರೇಮಿಯಿಂದ ಟಾರ್ಚರ್ – ವಿದ್ಯಾರ್ಥಿನಿ ಸೂಸೈಡ್!

ಹಾಸನ: ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡಿದ್ದಲ್ಲದೆ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೆದರಿಕೆ ಹಾಕಿದ ಆರೋಪದಿಂದ ಮನನೊಂದ 23 …

Leave a Reply

Your email address will not be published. Required fields are marked *