ಪಟ್ಟಣದ ಪುರಸಭೆ ಎದುರು ಸಫಾಯಿ ಕರ್ಮಚಾರಿ ಸುರೇಶ ಬಸವಾನಾಯ್ಕರ್ ಮೈ ಮೇಲೆ ಮಲ ಸುರಿದುಕೊಂಡು ಬುಧವಾರ ಪ್ರತಿಭಟನೆ ನಡೆಸಿದರು.ಪುರಸಭೆ ಆಡಳಿತ ಮಂಡಳಿಯು ಕೆಲ ತಿಂಗಳ ಗುತ್ತಿಗೆ ಆಧಾರದಲ್ಲಿ 10ಕ್ಕೂ ಹೆಚ್ಚು ಜನರ ನೇಮಿಸಿಕೊಂಡಿದೆ. ಈಗಲಾದರೂ ಮಗನಿಗೆ ನೇಮಿಸಿಕೊಳ್ಳಬೇಕು’ ಎಂದರು. ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸಿದ ಬಳಿಕ ಸುರೇಶ ಅವರು ಪ್ರತಿಭಟನೆ ಕೈಬಿಟ್ಟರು.
‘ಪ್ರತಿಭಟಿಸಿದ ವ್ಯಕ್ತಿಗೂ, ಪುರಸಭೆಗೂ ಸಂಬಂಧ ಇಲ್ಲ. ಸುರೇಶ ಹಿಂದೆ ಪುರಸಭೆಯಲ್ಲಿ ಸಫಾಯಿ ಕರ್ಮಚಾರಿಯಾಗಿ ಹೊರಗುತ್ತಿಗೆಯಡಿ ಕೆಲಸ ಮಾಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಇಲ್ಲ. ಸದ್ಯ ಕಾರ್ಮಿಕರನ್ನು ಗುತ್ತಿಗೆದಾರರು ನೇಮಿಸುತ್ತಾರೆ ಹೊರತು ಪುರಸಭೆಯಲ್ಲ’ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

