Breaking News

ಯೂಟ್ಯೂಬ್‌ನಲ್ಲಿ ವರದಿ ಮಾಡಿದಕ್ಕಾಗಿ ಜೀವ ಬೆದರಿಕೆ

ಕೋಟ: ಯೂಟ್ಯೂಬ್‌ ಡಿಜಿಟಲ್‌ ಮಾಧ್ಯಮದಲ್ಲಿ ವರದಿಯೊಂದನ್ನು ಪ್ರಕಟ ಮಾಡಿದಕ್ಕಾಗಿ ಮನೆಗೆ ಅಕ್ರಮ ಪ್ರವೇಶ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ವಡ್ಡರ್ಸೆಯ ಕುಂಬಾರಬೆಟ್ಟು ನಿವಾಸಿ ಪ್ರಣುತ್‌ ಕುಮಾರ್‌ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇವರು ಡಿಜಿಟಲ್‌ ಚಾನೆಲ್‌ವೊಂದರಲ್ಲಿ ಮಾಡಿದ ವರದಿಗೆ ಆಕ್ಷೇಪ ವ್ಯಕ್ತಪಡಿಸಿ ವಡ್ಡರ್ಸೆ ಯಾಳಕ್ಲು ನಿವಾಸಿ ಅಜಿತ್‌ ಕುಮಾರ್‌ ಶೆಟ್ಟಿ ಎನ್ನುವಾತ ಚಂದ್ರಶೆಟ್ಟಿಹಾಗೂ ಅಪರಿಚಿತ ಮಹಿಳೆಯೊಬ್ಬಳ ಜತೆ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪ್ರನುತ್‌ ಅವರ ದೊಡ್ಡಮ್ಮ ಪ್ರೇಮಾ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗೂ ಗಲಾಟೆ ಕೇಳಿ ಮನೆಯಿಂದ ಹೊರಬಂದ ಪ್ರನುತ್‌ಗೆ ವರದಿ ಡಿಲೀಟ್‌ ಮಾಡಬೇಕು ಒದುವೇಳೆ ಡಿಲೀಟ್‌ ಮಾಡದಿದ್ದಲ್ಲಿ ಕೋಟಾದಲ್ಲಿರುವ ನಿಮ್ಮ ಸ್ಟುಡಿಯೋಗೆ ಬೆಂಕಿ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Share News

About BigTv News

Check Also

ವೆಂಕಟಗಿರಿಕೋಟೆ ಗಲಾಟೆ 7 ಮಂದಿ ವಿರುದ್ಧ ಪ್ರಕರಣ

ಚಿಂತಾಮಣಿ: ನಗರದ ವೆಂಕಟಗಿರಿಕೋಟೆ ಬಡಾವಣೆಯಲ್ಲಿ ಏ.13ರಂದು ಸಂಜೆ ಕೈಕೈ ಮಿಲಾಯಿಸಿದವರನ್ನು ಗಸ್ತಿನಲ್ಲಿದ್ದ ಪೊಲೀಸರು ತಡೆದು ಬುದ್ಧಿ ಹೇಳಿದರೂ ಕೇಳದೆ ಮುಂದುವರಿದು …

Leave a Reply

Your email address will not be published. Required fields are marked *