Breaking News

ರಸ್ತೆಯುದ್ದಕ್ಕೂ ಮನುಷ್ಯನ ಕೈ, ಕಾಲುಗಳು ಪತ್ತೆ, 30 ಕಿ.ಮೀ ದೂರದಲ್ಲಿ ಸಿಕ್ತು ರುಂಡ!

ಕೊರಟಗೆರೆ ಹಾಗೂ ಕೊಳಾಲ ವ್ಯಾಪ್ತಿಯಲ್ಲಿ ಮೃತದೇಹದ ತುಂಡುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಸತತ ಹುಡುಕಾಟದ ಬಳಿಕ ರುಂಡ ಹಾಗೂ ಮುಂಡ ಪತ್ತೆಯಾಗಿವೆ. ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದಿಂದ ವೆಂಕಟಾಪುರದವರೆಗೆ ದೇಹದ ಕೈ ಹಾಗೂ ಕರುಳು ಪತ್ತೆಯಾಗಿತ್ತು.ಪತ್ತೆಯಾದ ಮೃತದೇಹದ ಭಾಗಗಳು ಮಹಿಳೆಯದ್ದು ಎಂಬ ಅನುಮಾನ ವ್ಯಕ್ತವಾಗಿದೆ.ಸರಿ ಸುಮಾರು 30 ಕಿ.ಮಿ ವ್ಯಾಪ್ತಿಯಲ್ಲಿ ರಸ್ತೆಯ ಪಕ್ಕದಲ್ಲಿ ದೇಹದ ತುಂಡುಗಳ ಪತ್ತೆಯಾಗಿವೆ. ಒಟ್ಟಾರೆಯಾಗಿ 8 ಕ್ಕೂ ಅಧಿಕ ಸ್ಥಳಗಳಲ್ಲಿ ದೇಹದ ವಿವಿಧ ಭಾಗಗಳು ಕವರ್​ಗಳಲ್ಲಿ ಪತ್ತೆಯಾಗಿವೆ. ಕೊರಟಗೆರೆ ಪೊಲೀಸರಿಂದ ತನಿಖೆ ಮುಂದುವರೆದಿದೆ.

Share News

About BigTv News

Check Also

ಮದುವೆಯಾಗಿ ಮಕ್ಕಳಿದ್ರೂ ಅಕ್ರಮ ಸಂಬಂಧ: ರೈಲಿಗೆ ತಲೆಕೊಟ್ಟು ವಿವಾಹಿತೆಯೊಂದಿಗೆ ಯುವಕ ಆತ್ಮಹತ್ಯೆ

ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ವಿವಾಹಿತೆ ಸಹನಾ (25) ಮತ್ತು ರಾಹುಲ್ (23) ಆತ್ಮಹತ್ಯೆಗೆ …

Leave a Reply

Your email address will not be published. Required fields are marked *