ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ತೀರ್ಥರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆರಂಭವಾಗಿರುವ ಸಪ್ತರಾತ್ರೋತ್ಸವಕ್ಕೆ ಶನಿವಾರ ತಿರುಪತಿ ತಿರುಮಲ ದೇವಸ್ಥಾನದ ಎಇಒ ರಾಮಕೃಷ್ಣ ಅವರು ಟಿಟಿಡಿಯಿಂದ ಮಂತ್ರಾಲಯಕ್ಕೆ ಶ್ರೀವಾರಿ ವಸ್ತ್ರವನ್ನು ತಂದರು.ಮಠದ ಪ್ರವೇಶದಲ್ಲೇ ಇರುವ ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ಶ್ರೀ ರಾಮಕೃಷ್ಣರು ಗೌರವಯುತವಾಗಿ ಶ್ರೀವಾರಿ ವಸ್ತ್ರವನ್ನು ಶ್ರೀ ಸುಬುಧೇಂದ್ರ ತೀರ್ಥರಿಗೆ ಹಸ್ತಾಂತರಿಸಿದರು. ನಂತರ ಶ್ರೀ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿ ಆರತಿ ಬೆಳಗಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

