ಮೈಸೂರು: ಸರಕಾರ ರದ್ದುಪಡಿಸಿರುವ ಬದಲಿ ನಿವೇಶನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುವ ಅಕ್ರಮ ಪ್ರಯತ್ನಗಳು ಮುಡಾದಲ್ಲಿ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯು ಮೈಸೂರು ಜಿಲ್ಲಾಧಿಕಾರಿಗೆ ಸೂಚಿಸಿದೆ.ಮುಖ್ಯವಾಗಿ ಮುಡಾ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವಾಗ ಅದಕ್ಕೆ ಸರಕಾರದ ಅನುಮತಿ ಪಡೆಯಬೇಕು. ಆದರೆ, ಮುಡಾ ಈ ನಿಯಮ ಪಾಲನೆ ಮಾಡಿಲ್ಲ. ಈ ಬಗ್ಗೆ ದೂರುಗಳು ಬಂದಿವೆ. ಹೀಗಾಗಿ ಸರಕಾರ ಮುಡಾಕ್ಕೆ ಇಂಥ ಅಕ್ರಮಗಳ ವಿರುದ್ಧ 2016ರಿಂದಲೇ ವರ್ಷಕ್ಕೆ ಎರಡರಂತೆ ನೋಟಿಸ್ ನೀಡಿದೆ. ಆದರೆ, ಇದನ್ನು ಆಯುಕ್ತರು ಗಂಭೀರವಾಗಿ ಪರಿಗಣಿಸದೇ ಅಕ್ರಮವನ್ನು ಮುಂದುವರಿಸಿದ್ದಾರೆ ಎನ್ನಲಾಗಿದೆ.ಮೈಸೂರಿನಲ್ಲಿ ವಿವಿಧ ಬಡಾವಣೆ ನಿರ್ಮಿಸಲು ಜಮೀನು ಸ್ವಾಧೀನ ಮಾಡಿಕೊಂಡಿದ್ದ ಮುಡಾ, ರೈತರಿಗೆ ಅಕ್ರಮವಾಗಿ ಬದಲಿ ನಿವೇಶನ ನೀಡಿರುವ ಸಾವಿರಾರು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಸರಕಾರ 2020ರ ನಂತರ ಬದಲಿ ನಿವೇಶನ ಹೆಸರಿನಲ್ಲಿ ಪಡೆದಿರುವ ಎಲ್ಲಾ ಮುಡಾ ನಿವೇಶನಗಳನ್ನು ರದ್ದುಪಡಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

