Breaking News

BJP, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರಿಂದ ದಾಳಿ:200 ವರ್ಷದ ಹಳೆಯ ಸಮಾಧಿಗೆ ಹಾನಿ!

ಫತೇಹ್‌ಪುರ ಜಿಲ್ಲೆಯಲ್ಲಿರುವ 200 ವರ್ಷದ ಹಳೆಯ ‘ಮಕ್‌ಬಾರ’ (ಸಮಾಧಿ) ಹಾಗೂ ಎರಡು ‘ಮಜಾರ್‌’ (ದೇಗುಲ)ಗಳನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಸೋಮವಾರ ಹಾನಿಗೊಳಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಪೊಲೀಸ್‌ ಮೂಲಗಳ ಪ್ರಕಾರ, ‘ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್‌ ಸಂಘಟನೆಯ ಕಾರ್ಯಕರ್ತರು ಸಮಾಧಿ ಮುಂದೆ ಸೇರಿದ್ದರು. ಈ ವೇಳೆ ಅಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಮುರಿದು, ‘ನವಾಬ್‌ ಅಬ್ದೂಸ್‌ ಸಮಾಧಿ’ಗೆ ತೆರಳಿ ಆರತಿ ಹಾಗೂ ಪೂಜೆ ಸಲ್ಲಿಸಿದರು.ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಮಕ್‌ಲಾಲ್‌ ಪಾಲ್‌, ಮಾಜಿ ಶಾಸಕ ವಿಕ್ರಮ್‌ ಸಿಂಗ್‌ ನೇತೃತ್ವದಲ್ಲಿ ಒಳಗೆ ನುಗ್ಗಿದ ಕಾರ್ಯಕರ್ತರು ಹನುಮಾನ್‌ ಚಾಲೀಸಾವನ್ನು ಪಠಿಸಿದ್ದಾರೆ.ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ.’ತಕ್ಷಣವೇ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಜನರು ಒಳಪ್ರವೇಶಿದಂತೆ ತಡೆಯಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ

Share News

About BigTv News

Check Also

ಅತ್ಯಾಚಾರ ಎಸೆಗಿದವರ ಮೇಲೆ‌ ಪ್ರತೀಕಾರ – ಅಪಹರಣ ಮಾಡಿ ಸಿಕ್ಕಿಬಿದ್ದ ಆರೋಪಿಗಳು!

ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಸ್ನೇಹಿತನ ಪ್ರೇಯಸಿಯನ್ನು ಕಾಲ್‌ಗರ್ಲ್ ಎಂದು ತಪ್ಪಾಗಿ ಭಾವಿಸಿ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ, ಪ್ರತೀಕಾರಕ್ಕಾಗಿ ಇಬ್ಬರನ್ನು ಅಪಹರಿಸಿ …

Leave a Reply

Your email address will not be published. Required fields are marked *