ಸರ್ಕಾರಿ ಅಧಿಕಾರಿಗಳ ವಿಶ್ರಾಂತಿ ತಾಣ ರೌಡಿಗಳ ಕೇಂದ್ರ ಸ್ಥಾನ ಆಯ್ತಾ…????
ಪ್ರವಾಸಿ ಮಂದಿರದ ಅಧಿಕಾರಿಗಳ ಇರಳು ಗಣ್ಣು..!!!!
ಡೀಲ್ ರಾಜಾ ಡೀಲ್ ಡೀಲ್ ಬಾ ಐಬಿ ಗೇ ಹೊಗೋಣ..!!!!!
ಸರ್ಕಿಟ್ ಹೌಸ್‌ನಲ್ಲಿ ರೌಡಿಶೀಟರ್‌ಗಳೂ ಮೀಟಿಂಗ್
ಪ್ರವಾಸಿ ಮಂದಿರದಲ್ಲಿ ಮೀಟಿಂಗ್ ಪ್ರಕರಣ
ಕಾನೂನು ಬಾಹಿರ ಕೃತ್ಯ ನಡೆಸಿದರೆ ಕ್ರಮ ಕಮಿಷನರ್ ಖಡಕ್ ಉತ್ತರ…
ಹುಬ್ಬಳ್ಳಿ: ಅದು ಸರ್ಕಾರಿ ಇಲಾಖೆಯ ಕಚೇರಿ. ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು ಸಭೆ ಮಾಡಲು, ವಾಸ್ತವ್ಯ ಮಾಡಲು ನಿರ್ಮಾಣ ಮಾಡಿರುವ ಕಟ್ಟಡ. ಆದರೆ ಸರ್ಕಾರಿ ಕಟ್ಟಡಗಳು ಪುಂಡರ ಹಾಗೂ ರೌಡಿಗಳ ಆಫೀಸ್ ಹಾಗೂ ಅಡ್ಡೆಗಳಾಗಿವೆ. ಅಷ್ಟಕ್ಕೂ ಏನಿದು ಸ್ಟೋರಿ ಅಂತೀರಾ ತೋರಸ್ತಿವಿ ನೋಡಿ..ರೌಡಿಗಳ ಅಡ್ಡವಾದ ಹುಬ್ಬಳ್ಳಿಯ ಸರ್ಕಿಟ್ ಹೌಸ್. ಸರ್ಕಿಟ್ ಹೌಸ್‌ನಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸಭೆ ನಡೆಸುವುದು ಸಾಮಾನ್ಯ.

ಆದ್ರೆ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ರೌಡಿಶೀಟರ್‌ಗಳೂ ಮೀಟಿಂಗ್ ಮಾಡಲು ಶುರು ಮಾಡಿದ್ದಾರೆ. ಅಲ್ಲದೇ ಬಹುತೇಕ ಪುಡಿರೌಡಿಗಳು ಸರ್ಕಿಟ್ ಹೌಸ್ ನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ… ಹುಬ್ಬಳ್ಳಿಯ ಪ್ರಮುಖ ಮೂರು ಗ್ಯಾಂಗ್‌ಗಳು ಸರ್ಕಿಟ್ ಹೌಸ್‌ನಲ್ಲಿ ಸೇರಿ ಸಭೆ ನಡೆಸಿರುಬ ಪ್ರಕರಣ ಬೆಳಕಿಗೆ ಬಂದಿದೆ. ಹಮ್ ಸಾಥ್ ಸಾಥ್ ಹೈ ಎಂದು ಕೈ ಜೋಡಿಸಿದ ರೌಡಿ ಶೀಟ್‌ಗಳು, ಸರ್ಕಾರಿ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೋ ಅಥವಾ ಸಹಕಾರವೋ ಗೊತ್ತಿಲ್ಲ ಸರ್ಕಿಟ್ ಹೌಸ್ ಈಗ ರೌಡಿಗಳ ಮೀಟಿಂಗ್ ಅಡ್ಡೆಯಾಗಿದೆ. ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿಯೂ ರೌಡಿ ಗ್ಯಾಂಗ್‌ಗಳಿವೆ. ಇತ್ತೀಚಿನ ದಿನಗಳಲ್ಲಿ ರೌಡಿ ಗ್ಯಾಂಗ್ ಗಳು ತೆರೆಮರೆಯಲ್ಲಿದ್ದು ತಮ್ಮ ಕಡೆಯ ಛೋಟಾ ಮೋಟಾ ಹುಡುಗರನ್ನು ಬಳಸಿಕೊಂಡು ಕುಕೃತ್ಯ ಮಾಡಿಸುತ್ತಿವೆ. ಸಣ್ಣ ಸಣ್ಣ ವಿಷಯಕ್ಕೂ

ರೌಡಿ ಗ್ಯಾಂಗ್‌ಗಳು ಕಿತ್ತಾಡಿಕೊಂಡಿರುವ ಉದಾಹರಣೆ ಇತ್ತೀಚೆಗೆ ಹೆಚ್ಚಾಗಿವೆ.ಇನ್ನೂ ಕಳೆದ 15 ದಿನಗಳ ಹಿಂದೆ… ಮತ್ತು… ಫೋನ್‌ನಲ್ಲಿ ಕಿತ್ತಾಡಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಹುಬ್ಬಳ್ಳಿಯ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪರಸ್ಪರ ದೂರುಗಳು ದಾಖಲಾಗಿದ್ದವು. ಮತ್ತೊಂದೆಡೆ ರೌಡಿಶೀಟರ್… ಕೊಲೆಗೆ ಸಂಚು ರೂಪಿಸಿದಂತಹ ಪ್ರಕರಣಗಳು ಹುಬ್ಬಳ್ಳಿಯಲ್ಲಿ ರೌಡಿ ಗ್ಯಾಂಗ್‌ಗಳು ಆ್ಯಕ್ಟಿವ್ ಆಗಿವೆ ಎನ್ನುವುದಕ್ಕೆ ಸಾಕ್ಷ್ಯ ಒದಗಿಸಿತ್ತು. ಪೊಲೀಸ್ ಭಯವೇ ಇಲ್ಲದೇ ರೌಡಿಗಳು ಪರಸ್ಪರ ಸೆಣಸಾಟಕ್ಕೆ ಇಳಿದಿದ್ದು ಹುಬ್ಬಳ್ಳಿಯ ನೆಮ್ಮದಿ ಕೆಡಿಸುವಂತೆ ಮಾಡಿತ್ತು. ಆದರೀಗ ಅದಕ್ಕೆ ಪುಷ್ಟಿ ನೀಡುವಂತೆ ಹುಬ್ಬಳ್ಳಿಯ ಸರ್ಕಿಟ್ ಹೌಸ್‌ನಲ್ಲಿ ಸಭೆ ನಡೆಸಿದ ರೌಡಿಗಳು, ಸರ್ಕಾರಿ ಕಚೇರಿಯಲ್ಲಿಯೇ ತಮ್ಮ ಪಾರುಪತ್ಯ ಮುಂದುವರಿಸಿದ್ದಾರೆ. ರೌಡಿಗಳ ಸಭೆ ಹಿಂದೆ ಇದೇಯಾ ಮತ್ತೊಂದು ಸ್ಕೆಚ್ ಎಂಬುವಂತ ಅನುಮಾನ ದಟ್ಟವಾಗಿದೆ. ಒಟ್ಟಿನಲ್ಲಿ ದಿ ಗೇಮ್ ಸ್ಟಾರ್ಟ್ ನೌ ಎನ್ನುವ ನಿಟ್ಟಿನಲ್ಲಿ ರೌಡಿ ಗ್ಯಾಂಗ್ ಮೀಟಿಂಗ್ ಮಾಡಿದ್ದು, ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈಗಾಗಲೇ ರೌಡಿಗಳನ್ನು ಮಟ್ಟ ಹಾಕುತ್ತಿರುವ ಪೊಲೀಸ್ ಆಯುಕ್ತರು, ಇಂತಹ ರೌಡಿಗಳನ್ನು ಹೆಡೆಮೂರಿ ಕಟ್ಟುತ್ತಾರಾ ಕಾದುನೋಡಬೇಕಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

