ಹುಬ್ಬಳ್ಳಿ: ಲೋಕಸಭೆ ಚುನಾವಣೆ ಬಂದಿದೆ ಹಿಂದೂ ಮುಸ್ಲೀಂ ಅಂತಾ ಬಿಜೆಪಿಯವರು ಚರ್ಚೆ ಮಾಡುತ್ತಿದ್ದಾರೆ. ಈ ಹಿಂದೆ ಪಾಕಿಸ್ತಾನಕ್ಕೆ ಕೇಕ್ ತಿನ್ನಲು ಹೋಗಿದ್ದು ನರೇಂದ್ರ ಮೋದಿ ಅವರು, ಲಂಡನ್ ನಿಂದ ರಾತ್ರೋರಾತ್ರಿ ನವಾಬ್ ಶರೀಫ್ ಅವರ ಮನೆಗೆ ಹೋಗಿ ಬಿರಿಯಾನಿ, ಕೇಕ್ ತಿಂದಿದ್ದು ಯಾರು? ಅವರ ಬಗ್ಗೆ ಚರ್ಚೆ ಮಾಡಲಿ ಎಂದು ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರಿಗೆ ಮಾತನಾಡಲು ಹಿಂದೂ-ಮುಸ್ಲಿಂ ವಿಷಯ ಬಿಟ್ಟರೆ ಬೇರೆ ಏನಿಲ್ಲ. ಕರ್ನಾಟಕ ರಾಜ್ಯ ಐಎಸ್ಐ ರಾಜ್ಯವಾ? ಇದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ತಿಳಿಯೋದಿಲ್ವಾ? ಅವರು ಲೋಕಸಭಾ ಸದಸ್ಯರಾಗಿ ಏನೇನೂ ಮಾತನಾಡುತ್ತಾರೆ? ಇದು ಸಂಪೂರ್ಣವಾಗಿ ತಪ್ಪು ಎಂದು ಹರಿಹಾಯ್ದರು.
ಸಿದ್ದರಾಮಯ್ಯ ರಾಜ್ಯದ ಉತ್ತಮ ಮುಖ್ಯಮಂತ್ರಿಯಾಗಿದ್ದಾರೆ. ಈ ಹಿಂದೆ ಕೋವಿಡ್ ಸಂದರ್ಭದಲ್ಲಿ ಸಾವನ್ನಪ್ಪಿದ ಹಿಂದೂಗಳನ್ನು ಶವ ಸಂಸ್ಕಾರ ಮಾಡಿದ್ದು ಮುಸ್ಲಿಂರು ಅವಾಗ ಎಲ್ಲಿದ್ದರೂ ಹಿಂದೂವಾದಿಗಳು, ಇದರ ಬಗ್ಗೆ ಯಾರು ಚರ್ಚೆ ಮಾಡತ್ತಾರಾ? ಅದರ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಲಿ ಎಂದು ಸವಾಲ್ ಹಾಕಿದರು. ಇದೀಗ ಚುನಾವಣೆ ಬಂದಿದೆ ಅದಕ್ಕೆ ಮಾತನಾಡತ್ತಾರೆ. ಇವರಿಗೆ ಮತ ಬೇಕು ಮತಗಳನ್ನು ತೆಗೆದುಕೊಳ್ಳಲಿ, ಅದು ಬಿಟ್ಟು ಬಾಯಿಗೆ ಬಂದಂತೆ ಹಿಂದೂ-ಮುಸ್ಲಿಂ ಜಾತಿ ಮಾಡುವುದು ಸರಿಯಲ್ಲ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





