ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಶ್ರಮಿಕರ ಕೊರತೆ ಹೆಚ್ಚಾಗಿದ್ದು ಸಾಗುವಳಿದಾರರು ಮಾನವ ಶ್ರಮದ ಬದಲು ಕೃಷಿ ಯಂತ್ರಗಳತ್ತ ಚಿತ್ತ ಹರಿಸಿದ್ದಾರೆ.ಹೊಲ, ಗದ್ದೆ, ತೋಟ, ತಿಟ್ಟುಗಳನ್ನು ಹಸನು ಮಾಡಲು, ಕಳೆ ಕೀಳಲು, ಬಂಡು ಎತ್ತರಿಸಲು ಯಂತ್ರಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ.ಸರ್ಕಾರ ಕಾರ್ಮಿಕರ ಸಮಸ್ಯೆ ನೀಗಿಸಿ, ಕೃಷಿ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಕೃಷಿ ಯಾಂತ್ರೀಕರಣ ಯೋಜನೆ ಜಾರಿಗೆ ತಂದಿದ್ದು 2025-26ನೇ ಸಾಲಿನಲ್ಲಿ ಉಳುಮೆಯಿಂದ ಕೊಯ್ಲಿನವರೆಗೂ ಹಲವು ಮಾದರಿಯ ಕೃಷಿ ಯಂತ್ರಗಳನ್ನು ನೀಡುತ್ತಿದೆ.ಸಾಮಾನ್ಯ ರೈತರಿಗೆ ಶೇ 50, ಪರಿಶಿಷ್ಟ ಜಾತಿ/ಪಂಗಡ ರೈತರಿಗೆ ಶೇ 90ರವರೆಗೆ ಸಹಾಯಧನ ಲಭ್ಯವಿದ್ದು ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಪಡೆದು ದಾಖಲಾತಿ ಪ್ರಕ್ರಿಯೆ ಪೂರೈಸಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಎನ್. ಜಿ.ಅಮೃತೇಶ್ವರ ಮಾಹಿತಿ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

