ಜಿಲ್ಲೆಯ ರಂಗಭೂಮಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ, ಸಂರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿರುವ ಪ್ರೊ. ಜಯಪ್ರಕಾಶ ಗೌಡರ ನಿಷ್ಕಾಮ ಸೇವೆ ಯುವಜನರಿಗೆ ಮಾದರಿಯಾಗಬೇಕು’ ಎಂದು ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಹೇಳಿದರು.ಪ್ರೊ. ಜೆಪಿ ಸಚಿವ ಕೆ.ವಿ. ಶಂಕರಗೌಡ ಅವರ ಶಿಷ್ಯರಾಗಿಅವರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿದ್ದವರು. ಶಂಕರಗೌಡ ಅವರ ಕಾಯಕ ನಿಷ್ಠೆ ಮತ್ತು ಸಂಘಟಿಸುವ ಸಂಸ್ಥಾಪಿಸುವ ಅಭಿವೃದ್ಧಿಗೊಳಿಸುವ ಕಾಯಕವನ್ನು ತಮ್ಮೊಳಗೆ ಆವಾಹಿಸಿಕೊಂಡು ನಾಲ್ಕು ದಶಕದಿಂದ ಜಿಲ್ಲೆಯಲ್ಲಿ ಸಂಸ್ಕೃತಿ ಸಂಘಟಕರಾಗಿ ಕಾರ್ಯ ನಿರ್ವಹಿಸುತ್ತಿರುವವರು.
ಕರ್ನಾಟಕ ಸಂಘದ ನೇತೃತ್ವ ವಹಿಸಿ ಎರಡು ದಶಕಗಳಿಂದ ಸಂಸ್ಥೆಯ ಅಭಿವೃದ್ಧಿಗೆ ಅವರ ಕಾರ್ಯ ಸ್ಮರಣೀಯ. ದಾನಿಗಳ ನೆರವು ಪಡೆದು ಸಂಘಕ್ಕೆ ಬಹುಮಹಡಿ ಕಟ್ಟಡ ನಿರ್ಮಾಣ ರಂಗಮಂದಿರ ನಿರ್ಮಾಣದ ಮಾಡಿದ್ದಾರೆ. 65 ದತ್ತಿನಿಧಿ ಪ್ರಶಸ್ತಿ ಸ್ಥಾಪಿಸಿ ಪ್ರತಿಭಾವಂತರನ್ನು ಸನ್ಮಾನಿಸಿದ್ದಾರೆ ಎಂದು ಕೆ.ಟಿ.ಶ್ರೀಕಂಠೇಗೌಡ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

