ಕಾರಿನ ಡೋರ್ ತೆರೆಯುತ್ತಿದ್ದಂತೆಯೇ ಟಾಟಾ ಹ್ಯಾರಿಯರ್ ಕಾರು ಹಿಂದಕ್ಕೆ ಚಲಿಸಿದ ಪರಿಣಾಮ ವ್ಯಕ್ತಿ ಅದರಡಿ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ತಮಿಳುನಾಡಿನಲ್ಲಿ ವರದಿಯಾಗಿದೆ.ಕಾರು ನಿಲ್ಲಿಸಿದ್ದಾಗ ಓರ್ವ ವ್ಯಕ್ತಿ ಕಾರಿನ ಡೋರ್ ತೆಗೆದಿದ್ದಾನೆ. ಈ ವೇಳೆ ಕಾರಿನ ಸಮನ್ಸ್ ಮೋಡ್ ಆಕಸ್ಮಿಕವಾಗಿ ಸಕ್ರಿಯಗೊಂಡಿದ್ದು, ನೋಡ ನೋಡುತ್ತಲೇ ಕಾರು ಹಿಂದಕ್ಕೆ ಚಲಿಸಲಾರಂಭಿಸಿದೆ. ಇಳಿಜಾರಾಗಿದ್ದಕಾರಣ ಕಾರು ಕೊಂಚ ಹಿಂದಕ್ಕೆ ಬರುತ್ತಲೇ ವೇಗವಾಗಿ ಹಿಂದಕ್ಕೆ ಚಲಿಸಿದೆ.ಈ ವೇಳೆ ಕಾರು ಹತ್ತಲು ಹೋಗಿದ್ದ ವ್ಯಕ್ತಿ ಅದನ್ನು ನಿಯಂತ್ರಿಸಲಾಗಿದೇ ಅದೇ ಕಾರಿನ ಅಡಿಗೆ ಸಿಲುಕಿದ್ದಾರೆ.ಪ್ರಕರಣದ ಬಗ್ಗೆ ಅಥವಾ ತನಿಖೆಯನ್ನು ಪ್ರಾರಂಭಿಸಲಾಗಿದೆಯೇ ಎಂದು ಅವಿನಾಶಿಯ ಅಧಿಕಾರಿಗಳು ಇನ್ನೂ ವಿವರಗಳನ್ನು ಖಚಿತಪಡಿಸಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

