Breaking News

ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್ ಬ್ಯಾನರ್ ನಡಿ ರವಿಕೆ ಪ್ರಸಂಗ ಸಿನಿಮಾವು ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ….

ಹುಬ್ಬಳ್ಳಿ: ದೃಷ್ಟಿ ಮೀಡಿಯಾ ಆ್ಯಂಡ್ ಪ್ರೊಡಕ್ಷನ್ ಬ್ಯಾನರ್ ನಡಿ ರವಿಕೆ ಪ್ರಸಂಗ ಸಿನಿಮಾವು ಜನವರಿ ತಿಂಗಳಲ್ಲಿ ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಕೊಡಂಕೇರಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಸೊಗಡಿನಲ್ಲಿ ಇರುವ ವಾತಾವರಣ, ಸ್ಥಳೀಯ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಹಾಸ್ಯದ ಸ್ಪರ್ಶವನ್ನು ದಕ್ಷಿಣ ಕರ್ನಾಟಕದ ಭಾಷೆಯನ್ನೇ ವಿಭಿನ್ನವಾಗಿ ತೋರಿಸುವ ಮೂಲಕ ಭಾಷಾ ಹಾಗೂ ಆಹಾರ ಸಂಸ್ಕೃತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ರವಿಕೆ ಸಿನಿಮಾದಲ್ಲಿ ಹೆಣ್ಣಿನ ಮನಸ್ಸಿನ ಭಾವನೆಯನ್ನು ಅನಾವರಣಗೊಳಿಸುವ ಮೂಲಕ ಮಹಿಳೆಯರ ಭಾವನೆಗೆ ಈ ಸಿನಿಮಾ ಬಣ್ಣ ತುಂಬಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈಗಾಗಲೇ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈಗಾಗಲೇ ಸಿನಿಮಾ ಹಲವು ನಿರೀಕ್ಷೆ ಮೂಡಿಸಿದೆ ಎಂದ ಅವರು ಸಿನಿಮಾದಲ್ಲಿ ೩ ಹಾಡುಗಳು ಇದ್ದು, ಸಿನಾಮಾ ದಕ್ಷಿಣ ಕನ್ನಡದಲ್ಲಿ ಚಿತ್ರೀಕರಣಗೊಂಡಿದೆ‌ ಎಂದರು. ಕಥೆ ಮತ್ತು ಸಂಭಾಷಣೆಯನ್ನು ಪತ್ರಕರ್ತೆ ಪಾವನಾ ಸಂತೋಷ್ ಅವರದಾಗಿದೆ ಎಂದ ಅವರು, ಚಿತ್ರದಲ್ಲಿ ಗೀತಾ ಭಾರತಿ ಭಟ್, ಸುಮನ್ ರಂಗನಾಥ್, ಪದ್ಮಜಾರಾವ್, ರಾಕೇಶ್ ಮೈಯ್ಯ, ರಘು ಪಾಂಡೇಶ್ವರ, ಸಂಪತ್ ಮೈತ್ರಿಯಾ, ಕೃಷ್ಣಮೂರ್ತಿ ಕವತಾರ ಸೇರಿದಂತೆ ಮೊದಲಾದವರು ಅಭಿನಯಿಸಿದ್ದು, ಸಂಗೀತ ನಿರ್ದೇಶನ ವಿನಯ ಶರ್ಮಾ, ಕಿರಣ್ ಕಾವೇರಪ್ಪ ಅವರು ಸಾಹಿತ್ಯ ನೀಡಿದ್ದು, ಚೈತ್ರಾ ಎಚ್.ಜಿ.ಜೋಗಿ, ಸುನೀತಾ, ಮಾನಸಾ‌ ಹೊಳ್ಳ, ಚೇತನ್ ನಾಯಕ ಅವರು ಚಿತ್ರಕ್ಕೆ ಸ್ವರ ನೀಡಿದ್ದಾರೆಂದರು.ಪತ್ರಿಕಾಗೋಷ್ಠಿಯಲ್ಲಿ ಪಾವಾನಾ ಸಂತೋಷ್, ನೂರ್ ಅಹ್ಮದ್ ಮಕಾಂದಾರ ಉಪಸ್ಥಿತರಿದ್ದರು.

Share News

About BigTv News

Check Also

ಮದುವೆಗೂ ಮುಂಚೆ ಜನಿಸಿದ್ದ ಮಗು ಕೊನೆಗೂ ಪತ್ತೆ: ಕಸಬಾಪೇಟ ಪೊಲೀಸರ ಕಾರ್ಯಕ್ಕೆ ಜನರ ಮೆಚ್ಚುಗೆ..!

Big TV ಸುದ್ದಿಗೆ ಬಿಗ್ ಇಂಪ್ಯಾಕ್ಟ್: ಕಸಬಾಪೇಟ ಠಾಣೆಗೆ ಬಂದ ಮಗು, ಪೊಲೀಸರ ಕೆಲಸಕ್ಕೆ ಭಾರೀ ಪ್ರಶಂಸೆ..! ಮದುವೆಗೂ ಮುಂಚೆ …

Leave a Reply

Your email address will not be published. Required fields are marked *