ಹೋಟೆಲ್ ವಿಷಯಕ್ಕೆ ಸಂಬಂಧಿಸಿ ತಂದೆಗೆ ಮಗ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಅದರಗುಂಚಿ ಗ್ರಾಮದ ಅಂಚಿಕಟ್ಟಿ ಪ್ಲಾಟ್‌ನಲ್ಲಿ ಶುಕ್ರವಾರ ನಡೆದಿದೆ.ಗ್ರಾಮದ ಯಲಪ್ಪ ಸುಂಕದ(52) ಗಾಯಗೊಂಡ ವ್ಯಕ್ತಿ. ಪುತ್ರ ಮಹಾಂತೇಶ ಸುಂಕದ ಚಾಕು ಇರಿದು ಹಲ್ಲೆ ನಡೆಸಿದ ಆರೋಪಿ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಟೆಲ್‌ನ ವಸ್ತುಗಳನ್ನು ಹಾಳು ಮಾಡಿರುವ ಕುರಿತು ಪುತ್ರ ಮಹಾಂತೇಶ, ತಂದೆಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪದಿಂದ ಅಪ್ಪನ ಹೊಟ್ಟೆ, ಭುಜಕ್ಕೆ ಆರೋಪಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಕೆಎಂಸಿ-ಆರ್‌ಐ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

